Showing posts with label ಶ್ರೀರಮಾಮಾಧವಾ ನಮಿಸುವೆ ದೇವಾ govinda. Show all posts
Showing posts with label ಶ್ರೀರಮಾಮಾಧವಾ ನಮಿಸುವೆ ದೇವಾ govinda. Show all posts

Sunday, 17 November 2019

ಶ್ರೀರಮಾಮಾಧವಾ ನಮಿಸುವೆ ದೇವಾ ankita govinda

by ಗೋವಿಂದದಾಸ
ಶ್ರೀ ರಮಾಮಾಧವಾ ನಮಿಸುವೆ ದೇವಾ ಪ

ವಾರಿಜೋದ್ಭವನುತಸಾರಸಗುಣಯುತಸಾರಿ ನುತಿಪೆ ದಯದೋರಿ ಸಲಹು ಹರೀಅ.ಪ

ತೋರುವಾ ಸುಂದರ ಶಾಂತಾಕಾರವಾ ಸ್ಥೂಲಸೂಕ್ಷ್ಮ ಶರೀರವಾ ತಪಯೋಗಿ ಹೃದಯಸುಮಾ ಸಾರವಾ ನೀ ಮೆರೆವಾ ಸಾರಸಾಂಘ್ರಿಯುಗವಾಶಂಕವಾ ಉದಿದತಿ ಭಕ್ತಕಳಂಕವಾ ಮುರಿದತಿದುರುಳರ ಬಿಂಕವಾ ಭಕ್ತಜನರ ಸದೃಶಾಂಕವಾಸೇರುವಾ ಪಂಕಜಾಸನ ಪಿತನೇ ಪಾಲಿಸು ಶಂಕರಗತಿಹಿತನೇ ಭವಭಯ ಬಿಂಕವ ಬಿಡಿಸೈ ಪಂಕಜ-ಕರಯುತ ವೆಂಕಟೇಶ ಸರ್ವಾಂಕಿತ ರೂಪನೆ2

ಸುಂದರಾ ವನಮಾಲ ಶೋಭಾ ಕಂದರಾಮುಖಪದ್ಮಾಕಾರ ಚಂದಿರಾ ಸದ್ಧರ್ಮಶಾಸ್ತ್ರಸ್ಮøತಿಮಂದಿರಾ ವೇದೋದ್ಧಾರಾ ಚಂದ್ರಸೂರ್ಯನಯನಾ ಕರುಣಾನಂದ ವಿಮಲಚರಣಾಮುನಿಜನವೃಂದ ವಂದ್ಯ ಚರಣಾರವಿಂದವನುಬಂದು ತೋರಿಸಿ ಗೋವಿಂದದಾಸನಪೊರೆ3
*******