Showing posts with label ಭಾರತೀ ದೇವೀ ನಿನ್ನನು ದಿನಾ pranesha vittala. Show all posts
Showing posts with label ಭಾರತೀ ದೇವೀ ನಿನ್ನನು ದಿನಾ pranesha vittala. Show all posts

Thursday, 14 November 2019

ಭಾರತೀ ದೇವೀ ನಿನ್ನನು ದಿನಾ ankita pranesha vittala

ಪ್ರಾಣೇಶದಾಸರು
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||ಮಾರಮಣನಪಾದವಾರಿಜಯುಗದಲೀ |ಚಾರುಭಕುತಿ ಕೊಡು ನಾರೀ ಶಿರೋಮಣಿ ಪ

ಇಂದ್ರಸೇನಳೆವಿಪ್ರಕನ್ನಿಕೆ | ಚಂದ್ರೇ ಶ್ರೀಕಾಳೆ |ನೊಂದೆನೆ ಬಹಭವ| ಬಂಧನದೊಳು ವೇಗಾ |ದಿಂದ ಕಾಯೆ ಕರುಣಾಸಿಂಧುದ್ರೌಪದಿ ದೇವಿ 1

ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||ಮಾತು ಮಾತಿಗೆ ಜಲಜಾತನಾಭನ ಸ್ತುತೀ |ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ 2

ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||ನುತಿಸಿಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |ಮತವನೈದಿ ಈ ಕೃತಿಗೆ ಮಂಗಳವೀಯೆ 3

ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ 4

ಮಾನನಿನ್ನದೆ | ಸತತ ಪೇಳ್ವದೇನು ಮಾಣದೇ ||ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |ಪೋಣಿಸುವದು ಮತಿ ಬಾಣ ವರದ ನುತೆ5
********