Showing posts with label ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ prasannashreenivasa satyapriya teertha stutih. Show all posts
Showing posts with label ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ prasannashreenivasa satyapriya teertha stutih. Show all posts

Thursday 5 August 2021

ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ ankita prasannashreenivasa satyapriya teertha stutih

  ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜ ಯುಗ್ಮ

ನಿತ್ಯ ಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |

ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿ ಹಯ

ವಕ್ತ್ರ ಶ್ರೀರಾಮನಿಗೆ ಪ್ರಿಯತರ ಮಹಂತ ಪ


ಆರಣೀ ಸಜ್ಜನರ ಸೌಭಾಗ್ಯ ಏನೆಂಬೆ

ಸೂರಿವರ ಸತ್ಯವರ್ಯ ಭಾವಿ ಸತ್ಯಪ್ರಿಯರ

ಆರಾಧಿಸಿ ಕಳುಹಿಸಿದ ಸ್ವಲ್ಪ ಕಾಲದಲೆ

ಆರಣಿಗೆ ಬಂದರು ಸತ್ಯವಿಜಯಾರ್ಯ 1

ಸಂಸ್ಥಾನ ಮೂರ್ತಿಸ್ಥ ಹರೀಪೂಜೆ ವೈಭವವು

ನಿತ್ಯ ಪ್ರವಚನ ಪಾಠ ಕೀರ್ತನೆ ಏನೆಂಬೆ

ಸತ್ಯವಿಜಯರು ಯುಕ್ತ ಕಾಲದಲಿ ದೇಹ

ಅದಾರುಢ್ಯ ಹೊಂದಿದರು ರಾಜಗೆ ಹೇಳಿದರು 2

ತಮ್ಮ ತರುವಾಯ ಸಂಸ್ಥಾನ ಸರ್ವಾಡಳಿತ

ಶ್ರೀಮನೋಹರ ಹರಿಪ್ರಿಯರು ಸತ್ಯವರ್ಯ

ಸುಮನೋಹರ ಸತ್ಯಪ್ರಿಯ ತೀರ್ಥ ನಾಮದಲಿ

ರಮಾರಮಣನ ಸೇವೆಗೆ ವಹಿಸಬೇಕೆಂದು 3

ಆದ ಕಾರಣ ಆ ಸ್ವಾಮಿಗಳ ಕರೆತರಿಸಿ

ಭಕ್ತಿ ವಿನಯದಿ ಮಠವ ಒಪ್ಪಿಸಬೇಕೆಂದು

ಹಿತದಿ ಆಜ್ಞಾಪಿಸಿ ಹರಿಪುರಯೈದಿದರು

ಚೈತ್ರ ಕೃಷ್ಣ ಪುಣ್ಯದಿನ ಏಕಾದಶಿ ದ್ವಾದಶಿಲಿ 4

ಆರಣೀರಾಜನು ಸತ್ಯವರ್ಯ ತೀರ್ಥರಲಿ

ಅರಿಕೆ ಮಾಡಿ ಸ್ವಾಮಿಗಳು ಕೆಲವು ದಿನಮೇಲ್

ಆರಣಿಗೆ ಪೋದರು ಶ್ರೀಮಠದ ಆಡಳಿತ

ಹರಿ ಪ್ರೀತಿ ಸೇವೆಗೆ ಕೊಂಡರು ತಾವು 5

ಮೊದಲೇವೆ ಶ್ರೀ ಸತ್ಯವರ್ಯ ತೀರ್ಥರ ಮಠ

ಸಂಸ್ಥಾನ ವೈಭವದಿ ಪ್ರಕಾಶಿಸುತ್ತಿತ್ತು

ಸತ್ಯ ವಿಜಯರ ಕೋರಿಕೆಯಂತೆ ಈವಾಗ

ಹೊಂದಿದರು ಸತ್ಯವಿಜಯರ ಸಂಸ್ಥಾನ 6

ಸತ್ಯಾಭಿನವರ ಪದ್ಧತಿಯಲ್ಲಿ ಶ್ರೀಮಠ

ಸತ್ಯಪೂರ್ಣ ಸತ್ಯವಿಜಯರಿಂದ ವೈಭವದಿ

ಇದ್ದ ಆಮಠ ಪೀಠ ಅಲಂಕರಿಸಿದರೀಗ

ಸತ್ಯವರ್ಯ ವೈರಾಗ್ಯ ನಿಧಿಯು ಶ್ರೀಮಾನ್ 7

ಬಾದರಾಯಣ ರಾಮ ಯದುಪತಿಯ ಸೇವೆಗೆ

ಪ್ರೀತಿಗೆ ಸ್ವಾಮಿಗಳು ಮಠವನ್ನು ಹೊಂದಿ

ಸತ್ಯವಿಜಯರು ಕೋರಿದಂತೆ ತಮ್ಮಯನಾಮ

ಸತ್ಯಪ್ರಿಯತೀರ್ಥರೆಂದು ಕೊಂಡರು ಮುದದಿ 8

ಧನ ಸತ್ಯಪ್ರಿಯ ತೀರ್ಥರು

ವಿಜೃಂಭಣೆಯಿಂದ ಚರಿಸಿ ಪುರಜನರ್ಗೂ

ರಾಜನಿಗೂ ಫಲ ಮಂತ್ರಾಕ್ಷತೆಗಳ ಕೊಟ್ಟು

ರಾಜ ಮಾರ್ಯಾದೆ ಕೊಂಡುಹೊರಟರು ಅಲ್ಲಿಂದ 9

ಆಂಧ್ರದೇಶದ ಕಡಪ ಉತ್ತರ ಕರ್ನಾಟಕ

ಮತ್ತು ದಕ್ಷಿಣ ಕರ್ನಾಟಕ ಶ್ರೀರಂಗ

ಇಂಥ ಸ್ಥಳಗಳಲ್ಲಿ ಸಂಚಾರ ಮಾಡುತ್ತಾ

ಹಿತದಿ ಅನುಗ್ರಹಿಸಿದರು ಭಕ್ತವೃಂದಕ್ಕೆ 10

ಪೀತಾಸಿಂಗ ರಾಘವಜಿ ಮುರಾರಿ ಮೊದಲಾದ

ಕೃತಜ್ಞ ಜನ ಪ್ರಮುಖರ ಭಕ್ತಿ ಯುತವಾದ

ಭೂದಾನ ಗ್ರಾಮದಾನ ಮಾಡಿದ್ದ ಸ್ವೀಕರಿಸಿ

ಶ್ರೀದನಿಗೆ ಅರ್ಪಿಸುತ ಒಲಿದರು ಸಜ್ಜನಕೆ 11

ರಾಯಚೂರು ಹರಿಯಾಚಾರ್ಯರೆಂಬ ವೈಷ್ಣವ

ಕಾಯವಾಙ್ಮನ ಇದ್ದ ಬ್ರಾಹ್ಮಣ ದಂಪತಿಯು

ಪ್ರಿಯ ವತ್ಸರುಗಳೊಡೆ ಸ್ವಾಮಿಗಳ ಕಡೆ ಬಂದು

ವಿನಯದಿ ನಮಿಸಿ ನಿಂತರು ಮಠದಲ್ಲಿ 12

ಹರಿಯಾಚಾರ್ಯರ ಮಕ್ಕಳಲಿ ರಾಮಾರ್ಯ

ಸ್ಫುರದ್ವರ್ಚಸ್ ಯುತ ಬಹುಚೂಟಿಯಾದ ಮಗನು

ಶ್ರೀ ಶ್ರೀಗಳು ಆ ಹುಡುಗಗೆ ಮಠದಲ್ಲಿ

ಶಾಸ್ತ್ರಾಭ್ಯಾಸಾದಿಗಳ ಒದಗಿಸಿದರು 13

ಕಾಲಕ್ರಮದಲ್ಲಿ ವಟುಗೆ ವಿವಾಹ ಮಾಡಿದರು

ಮಕ್ಕಳು ರಾಮಚಾರ್ಯರಿಗೆ ಎರಡು

ಮಾಲೋಲ ಇಚ್ಛೆಯಿಂ ಸ್ವಾಮಿಗಳು ದಕ್ಷಿಣ

ಸ್ಥಳ ಯಾತ್ರೆ ಗೈದರು ಸೇತು ಸಮೀಪ 14

ಮಾನಾಮಧುರೆಯ ವೇಗವತೀ ತೀರವು

ತನ್ನ ಮಠವನ್ನು ಸ್ಥಾಪಿಸಿದರು ಅಲ್ಲಿ

ಘನ ಮಹಾ ಸೂರಿಯು ರಾಮಚಾರ್ಯರನ್ನ

ತನ್ನ ಸಮೀಪದಲ್ಲೇ ನಿಲ್ಲಿಸಿದರು 15

ಬಹು ವರ್ಷ ಸಂನ್ಯಾಸ ರತ್ನರಾಗಿ ಬೆಳಗಿ

ವಹಿಸಿ ಸಂಸ್ಥಾನವ ಏಳು ವರ್ಷ

ಶ್ರೀಹರಿಗೆ ಪ್ರಿಯರಾಮಾಚಾರ್ಯರಿಗೆ ಸಂನ್ಯಾಸ

ವಿಹಿತದಿ ಇತ್ತರು ಶ್ರೀ ಸ್ವಾಮಿಗಳು 16

ಸತ್ಯಪ್ರಿಯ ಗುರುವರ್ಯ ತಮ್ಮ ಪ್ರಿಯ ಶಿಷ್ಯರಿಗೆ

ಸತ್ಯಬೋಧ ತೀರ್ಥವೆಂಬ ಸಂನ್ಯಾಸ ನಾಮವನ್ನಿತ್ತು

ಚೈತ್ರ ಶುದ್ಧ ಹದಿಮೂರನೆ ಪುಣ್ಯ ದಿನದಿ

ಯದುಪತಿಯ ಧ್ಯಾನಿಸುತ ಹರಿಪುರಯೈದಿದರು 17

ಮತ್ತೊಂದು ಅಂಶದಲಿ ಬೃಂದಾವನದಲ್ಲಿ

ನಿಂತಿಹರು ಅಶ್ವಾಸ್ಯಧ್ಯಾನಪರರಾಗಿ

ಹಿತದಿ ಕೊಡುತಿಹರು ವಾಂಛಿತವ ಶರಣರಿಗೆ

ಸದಾನಮೋ ಮಾಂಪಾಹಿ ಗುರುವರ್ಯ ಶರಣು 18

ಎನ್ನ ಎನ್ನಂಥವರ ಅನಂತ ಅಪರಾಧಗಳ

ಘನ ದಯದಿ ಕ್ಷಮಿಸಿ ಬಹು ಕೃಪದಿ ಪಾಹೀ

ವನರುಹಾಸನಪಿತ ಮಧ್ವಸ್ಥ ಶ್ರೀಪತಿ

`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 19 ಪ

***