Showing posts with label ಪಾರ್ವತಿ ಜಗದ್ಭರಿತೇ ಮಹೇಶ್ವರಿ govinda. Show all posts
Showing posts with label ಪಾರ್ವತಿ ಜಗದ್ಭರಿತೇ ಮಹೇಶ್ವರಿ govinda. Show all posts

Wednesday, 13 November 2019

ಪಾರ್ವತಿ ಜಗದ್ಭರಿತೇ ಮಹೇಶ್ವರಿ ankita govinda

by ಗೋವಿಂದದಾಸ
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪ

ಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1

ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2
ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
********