ankita ತಂದೆವೆಂಕಟೇಶವಿಠಲ
ರಾಗ: ಶಹನ/ಅಠಾಣ ತಾಳ: ಆದಿ
ಶ್ರೀ ರಾಮಚಂದ್ರಪಂಕೇರುಹಚರಣಸು-
ಧಾರಸವ್ರತ ಪೊರೆಯೋ ರಾಘವೇಂದ್ರ ಪ
ಕೋರೀದವರ ಮನಸಾರೇ ಬೀರುವ ಬುಧ
ತಾರಾಪರಿವೃತ ಪರಮೋದಾರೇಂದು ಗುಣಸಿಂಧು ಅ.ಪ
ಕುಂಭಕೋಣದಿ ಶ್ರೋತ್ರೀಯಾಂಬರದಿನಮಣಿ ಎಂಬುವತೆರನುದಿಸೀ
ಇಂಬು ವೈಣಿಕ ಶಾಸ್ತ್ರಾಂಭೋನಿಧಿಗೆ ಚಂದ್ರಬಿಂಬದವೊಲು ರಾಜಿಸೀ
ಅಂಬುಜೋದ್ಭವಪಿತ ನಾನೆಂಬ ದುಸ್ತಾರ್ಕಿಕ
ರಂಭಾಟವಿಗೆ ಮತ್ತ ಕುಂಭಿ ಎಂದೆನಿಸಿದ 1
ಆಶುಗಮನಮತ ಭೂಸುರಮಕುಟ ಪ್ರಕಾಶ ವಿದ್ಯನ್ಮಣಿಯೆ
ಶ್ರೀ ಸುಧೀಂದ್ರಾರ್ಯವಿದ್ಯಾಸಾಮ್ರಾಜ್ಯಸಿಂಹಾಸಾದಿಷ್ಟಿತಮುನಿಯೇ
ವ್ಯಾಸಬಾಹ್ಲೀಕ ವಿಭೀಷಣ ಪ್ರಹ್ಲಾದ
ಲೇಸು ರೂಪದ ಮಂತ್ರಾವಾಸನಿಕೇತನ 2
ವಾತಾಗಮಾಬ್ಜ ಪ್ರದ್ಯೋತ ಸದ್ಗ್ರಂಥ ಪ್ರಣೀತ ಪರಿಣತ ಪೂಜ್ಯನೇ
ಭೂತಳದೊಳಗೆ ಅಭೂತಪೂರ್ವಮಹಿಮಾತಿಶಯ ವಿರಾಜನೇ
ಪಾತಕಹರ ತಂದೆವೆಂಕಟೇಶವಿಠಲನ್ನ
ಪ್ರೀತ್ಯಾಸ್ಪದನೆ ಎನ್ನ ಮಾತ ಲಾಲಿಸಿ ಕಾಯೋ 3
***
ಪರಿವೃತ=ಸುತ್ತುವರಿದ; ರಂಭಾಟವಿ=ಬಾಳೆಯ ಮರದ ಅಡವಿ;
ಮತ್ತ ಕುಂಭ=ಮದಿಸಿದ ಆನೆ; ವಾತಾಗಮಾಬ್ಜ
ಪ್ರದ್ಯೋತ=ವಾಯುದೇವರ ಮತವೆಂಬ ಕಮಲಕ್ಕೆ
ಸೂರ್ಯನಂತೆ; ಪ್ರಣೀತ=ರಚಿತ;