Showing posts with label ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ramesha. Show all posts
Showing posts with label ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ramesha. Show all posts

Wednesday, 4 August 2021

ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ankita ramesha

.. 

ಮಾರಜನಕನ ಮಾರಿ ನೋಡುತಸುಖವ ಸೂರೆಗೊಂಡರೆನೀರೆ ದ್ವಾರಕಾಪುರದವರು ಪ.


ದಟ್ಟಾದ ಬೀದಿಯಲಿ ಪಟ್ಟಾವಳಿಯ ಜವಳಿ ಇಟ್ಟು ಮಾರುವರು ಕಡೆಯಿಲ್ಲಇಟ್ಟು ಮಾರುವರು ಕಡೆಯಿಲ್ಲದ್ವಾರಕಾಶೆಟ್ಟರ ಭಾಗ್ಯ ಸರಿಗಾಣಿ1

ಅಚ್ಚ ಜರತಾರಿ ಹೆಚ್ಚಿನ ಜವಳಿಯಚಿತ್ರದ ಮಲ್ಲಿಗೆ ನಡುವಿಟ್ಟಚಿತ್ರದ ಮಲ್ಲಿಗೆ ನಡುವಿಟ್ಟು ಅಲ್ಲಲ್ಲಿಹಚ್ಚಿ ಮಾರುವವರು ಕಡೆಯಿಲ್ಲ 2

ಜವಳಿ ಅಂಗಡಿ ಮುಂದೆ ಹವಳಗಾರರು ಅಲ್ಲಿ ಕೊಳ್ಳುವ ನಾರಿಯರು ಕಡೆಯಿಲ್ಲ ಕೊಳ್ಳುವ ನಾರಿಯರು ಕಡೆಯಿಲ್ಲ ದ್ವಾರಕಾಕಳೆಯ ವರ್ಣಿಸಲು ವಶವಲ್ಲ 3

ಕಂಚು ಹಿತ್ತಾಳೆ ಮಾರುವ ಕಂಚುಗಾರರಂಗಡಿಸಂಚಿತವಾದ ನವಧಾನ್ಯಸಂಚಿತವಾದ ನವಧಾನ್ಯ ಅಲ್ಲಲ್ಲಿಹಚ್ಚಿಮಾರುವವರು ಕಡೆಯಿಲ್ಲ4

ರಂಗ ರಾಮೇಶನ ನಗರೀಲೆ ಬಂಗಾರ ಬೆಳ್ಳಿ ಬೆಲೆ ಮಾಡಿಬಂಗಾರ ಬೆಳ್ಳಿ ಬೆಲೆ ಮಾಡಿ ಮಾರುವ ರಂಗದುಟಿಯವರುಕಡೆಯಿಲ್ಲ 5

****