Showing posts with label ಪಾಲಿಸು ಬಾಲಗೋಪಾಲ ಕೃಪಾಳು prasannavenkata. Show all posts
Showing posts with label ಪಾಲಿಸು ಬಾಲಗೋಪಾಲ ಕೃಪಾಳು prasannavenkata. Show all posts

Wednesday, 13 November 2019

ಪಾಲಿಸು ಬಾಲಗೋಪಾಲ ಕೃಪಾಳು ankita prasannavenkata

by ಪ್ರಸನ್ನವೆಂಕಟದಾಸರು
ಪಾಲಿಸು ಬಾಲಗೋಪಾಲ ಕೃಪಾಳು ನೀಪಾಲಿಸು ಬಾಲಗೋಪಾಲ ಬಾಲಕಲೀಲಾ ವಿಶಾಲ ಮಾಲೋಲಜ ಲಲಿತ ಬಾಲಗೋಪಾಲ ಪ.

ರಂಗು ರನ್ನುಂಗುರದಂಗುಲಿ ಸಂಜÕದಿಪೊಂಗೊಳಲ ಸಂಗೀತ ರಂಗಮಂಗಳ ಭಾಂಗ ತ್ರಿಭಂಗ ಗೋಜಂಗುಳಿಸಂಗವ ಹಿಂಗದ ರಂಗಅಂಗಜತಿಂಗಳ್ಪತಂಗ ರೂಪಂ ಗೆಲ್ವತುಂಗೋಜ್ವಲಾಂಗ ಶ್ರೀರಂಗಮಂಗಳಪಾಂಗ ಗುಣಂಗಳ್ತರಂಗ ಆಸಂಗಿ ಜಗಂಗಳ್ಗೆ ರಂಗ 1

ಕೆಂದಾವರ್ಯಂದದಿ ಸುಂದರ ದ್ವಂದ್ವಾಂಘ್ರಿಚೆಂದುಳ್ಳ ತಂದೆ ಗೋವಿಂದಬಂದಿ ಕಾಲಂದುಗೆ ಪೊಂದುಡುಗಿಂದೆಸೆವನಂದನ ಕಂದ ಗೋವಿಂದನಂದವ್ರಜ ಹೊಂದಿದವೃಂದಾರಕೇಂದ್ರಗೋವೃಂದದಿ ನಿಂದ ಗೋವಿಂದಇಂದಿರಜ ಇಂದುಮೌಳೀಂದ್ರ ಮುನೀಂದ್ರಾದಿವಂದಿತ ನಂದ ಗೋವಿಂದ 2

ಉನ್ನತ ಪುಣ್ಯ ಗೋಗನ್ನೇರ ಮನ್ನಿಪಚೆನ್ನಿಗ ಚಿನ್ನಪಾವನ್ನಪನ್ನಗಔನ್ನತ್ಯ ಭಿನ್ನ ದಯಾರ್ಣವ ಜಗನ್ನ ಮೋಹನ್ನಪಾವನ್ನಸನ್ಮುನಿಜನ್ನ ಭಾರ್ಯಾನ್ನವನುಣ್ಣುವಚಿನ್ಮಯ ಪುಣ್ಯಪಾವನ್ನಸ್ವರ್ಣಗಿರಿ ನಿಕೇತನ್ನ ನೀ ಧನ್ಯ ಪ್ರಸನ್ನವೆಂಕಟರನ್ನಪಾವನ್ನ3
*******