ರಾಗ ವಲಚಿ ಆದಿತಾಳ
3rd Audio by Mrs. Nandini Sripadಬಾ ಬಾ ರಂಗ ಭುಜಂಗಶಯನ
ಕೋಮಲಾಂಗ ಕೃಪಾಪಾಂಗ ॥ ಪ ॥
ಬಾ ಬಾ ಎನ್ನಂತರಂಗ
ಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥
ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ
ಇಭವರದನೇ ಶ್ರೀನಿವಾಸ ॥ 1 ॥
ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ -
ರೇಳು ಲೋಕದ ಜನಕಾವ ॥ 2 ॥
ಚಂದ್ರಪುಷ್ಕರಿಣಿಯ ತೀರವಿಹಾರ
ಇಂದ್ರಾದಿಸುರ ಪರಿವಾರ
ಚಂದ್ರಶೇಕರನುತನಾದ ಸುಖ
ಸಾಂದ್ರ ಸುಗುಣಗಂಭೀರ ॥ 3 ॥
ಈಷಣತ್ರಯಗಳ ದೂಷಿತ ನಿರುತ ಅ -
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸನಾಭರಣ ವಿ -
ಭೀಷಣಗೊಲಿದ ಸುತ್ರಾಣ ॥ 4 ॥
ಶಂಬರಾರಿಯ ಪಿತ ಡಂಭರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರುನಾರದ ಕೃತಸ್ತೋತ್ರ ॥ 5 ॥
***
ರಾಗ ಕೇದಾರಗೌಳ. ಆದಿ ತಾಳ (raga tala may differ in audio)
Ba ba ranga bujangasayana komalanga krupapanga||pa||
Ba ba ennantaranga mallaragaja singa durita bavabanga||a.pa||
Ubaya kaveriya madhyanivasa
Abayadayaka mandahasa
Sabeyolu satiyala kayida ullasa
Ibavaradane srinivasa||1||
Elu prakarada malige maneyolage
Galiya devara deva
Solasasira gopiyaralida I-
Relu lokada jana kava||2||
Camdra pushkariniya tiravihara
Indradi sura parivara
Candrasekara nutanada suka-
Sandra suguna gambira||3||
Ishanatrayagala dushita nirata a-
Sesha vibava janapala
Bushita nana vastrabarana vi-
Bishinagolida suprana||4||
Sambarariya pita dambarahita mana
Ambujadalanibanetra
Kambucakradhara purandaravithala
Tumburu naradakruta stotra||5||
***
pallavi
bA bA ranga bhujanga shayana kOmalAnga krpApAnga
anupallavi
bA bA ennantaranga mallara gaja singa durita bhava bhanga
caraNam 1
ubaya kAvEriya madhya nivAsa abhaya dAyaka mandahAsa
sabheyoLu satiyaLa kAyida ullAsa ibha varadena shrInivAsa
caraNam 2
Elu prAkArada mALige maneyoLage kALiya dEvara dEva
sOLa sAsira gOpiyarALida IrELu lOkada janakAva
caraNam 3
candra puSkariNiya tIra vihAra indrAdi sura parivAra
candrashEkaranuta nAda sukha sAndara suguNa gambhIra
caraNam 4
rakSaNa trayagaLa dUSita nirata ashESa vibhava janapAla
bhUSita nAnA vastrAbharaNa vibhISaNa kolida suprANa
caraNam 5
shambarAriya pita Dambarahita mana ambujadaLa nibha nEtra
kambu cakradhara purandara viTTala tumburu nArada krta stOtra
***
ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ ||ಪ||
ಬಾ ಬಾ ಎನ್ನಂತರಂಗ ಮಲ್ಲರ ಗಜಸಿಂಗ ದುರಿತಭವ ಭಂಗ ||ಅ||
ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ
ಇಭವರದನೆ ಶ್ರೀನಿವಾಸ ||
ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನಕಾವ ||
ಚಂದ್ರಪುಷ್ಕರಿಣಿಯ ತೀರವಿಹಾರ
ಇಂದ್ರಾದಿಸುರ ಪರಿವಾರ
ಚಂದ್ರಶೇಕರನುತನಾದ ಸುಖ
ಸಾಂದ್ರ ಸುಗುಣಗಂಭೀರ ||
ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣಾ
ವಿಭೀಷಣಗೊಲಿದ ಸುಪ್ರಾಣ ||
ಶಂಬರಾರಿಯ ಪಿತ ಡಂಭರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರುನಾರದ ಕೃತಸ್ತೋತ್ರ ||
*******
ಬಾ ಬಾ ರಂಗ ಭುಜಂಗ ಶಯನ ಕೋಮಲಾಂಗ ಕೃಪಾಂಗ ಪಲ್ಲವಿ
ಬಾ ಬಾ ಎನ್ನಂತರಂಗ ಮಲ್ಲರ ಗಜ ಸಿಂಗ ದುರಿತ ಭವ ಭಂಗ ಅನುಪಲ್ಲವಿ
ಉಭಯ ಕಾವೇರಿಯ ಮಧ್ಯ ನಿವಾಸ ಅಭಯ ದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ ಇಭ ವರದನೆ ಶ್ರೀನಿವಾಸ 1
ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ ಕಾಳಿಯ ದೇವರ ದೇವ
ಸೋಳ ಸಾಸಿರ ಗೋಪಿಯರಾಳಿದ ಈರೇಳು ಲೋಕದ ಜನಕಾವ 2
ಚಂದ್ರ ಪುಷ್ಕರಿಣಿಯ ತೀರ ವಿಹಾರ ಇಂದ್ರಾದಿ ಸುರ ಪರಿವಾರ
ಚಂದ್ರಶೇಖರನುತನಾದ ಸುಖಸಾಂದ್ರ ಸುಗುಣ ಗಂಭೀರ 3
ರಕ್ಷಣ ತ್ರಯಗಳ ದೂಷಿತ ನಿರತ ಅಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿಭೀಷಣಗೊಲಿದ ಸುಪ್ರಾಣ 4
ಶಂಬರಾರಿಯ ಪಿತ ಡಂಭರಹಿತ ಮನ ಅಂಬುಜದಳ ನಿಭ ನೇತ್ರ
ಶಂಖ ಚಕ್ರಧರ ಪುರಂದರ ವಿಟ್ಠಲ ತುಂಬುರು ನಾರದ ಕೃತ ಸ್ತೋತ್ರ 5
*******