Showing posts with label ಮನುಜ ದನುಜ ರಿವರೆವೆ ನೋಡಿ ದನುಜನು ದೈತ್ಯರೊಳೆನ ಬ್ಯಾಡಿ gurumahipati. Show all posts
Showing posts with label ಮನುಜ ದನುಜ ರಿವರೆವೆ ನೋಡಿ ದನುಜನು ದೈತ್ಯರೊಳೆನ ಬ್ಯಾಡಿ gurumahipati. Show all posts

Wednesday, 1 September 2021

ಮನುಜ ದನುಜ ರಿವರೆವೆ ನೋಡಿ ದನುಜನು ದೈತ್ಯರೊಳೆನ ಬ್ಯಾಡಿ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಮನುಜದನುಜ ರಿವರೆವೆ ನೋಡಿ | ದನುಜನು ದೈತ್ಯರೊಳೆನ ಬ್ಯಾಡಿ ಪ 


ಹರಿ ನೆನೆಯುತ ಹರಿಕಥೆಗಳ ಕೇಳುತ | ಹರಿ ಭಕುತಿಗೆ ಬೆರೆದವ ಮನುಜಾ | ನಿರುತ ಆಹಾರ ನಿದ್ರೆ ಚರಟ ಮಾತುಗಳಾಡಿ | ಬರಿದೆವೆ ದಿನಗಳೆವವ ದನುಜಾ 1 

ಪರರ ಸದ್ಗುಣ ವಾಲಿಸಿಕೊಳುತಲಿ | ಸಕ | ಲರಿಗೆ ಮನ್ನಿಸುವವನೇ ಮನುಜಾ | ಗರುವ ಹಿಡಿದು ತನ್ನ ಹೊಗಳುತ ಅನ್ಯರ | ಬರಿದೆ ನಿಂದಿಸುವವನೆ ದನುಜಾ 2 

ಪಥ | ಸರ್ಕನೆ ತಿಳಿದವ-ನೆವೆ ಮನುಜಾ | ಮೂರ್ಖತನ ಹಿಡಿದು ಸಾಧು ಸಂತರಲಿಕು | ತರ್ಕವ ಮಾಡುವವನೆ ದನುಜಾ 3 

ಹುಟ್ಟಿದರಲಿ ಸಂತುಷ್ಟದಿ ಕವಳವ | ನಿಷ್ಠೆಗೆ ತಾರದವನೆ ಮನುಜಾ | ನೃಪರ ನಂಬಿ ಲಾಭಾ ಲಾಭ ಕೊಡುವ | ಸೃಷ್ಟೀಶನನು ಮರೆತವ ದನುಜಾ 4 

ತಂದೆ ಮಹಿಪತಿ ಭೋಧವ ಮನದಲಿ | ತಂದು ಹರುಷವ ಪಡುವವ ಮನುಜಾ | ದಂದುಗ ಚಿತ್ತದಿ ಹೇಳಿದ ಮಾತಿಗೆ | ಸಂದೇಹ ಬಟ್ಟವನವ ದನುಜಾ 5

***