ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ
ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1
ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2
ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3
ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4
ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5
ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6
ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7
ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8
ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9
ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10
ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
****