Showing posts with label ಹರಿಹರಿ ನಿನ್ನನು ಒಲಿಸಲುಬಹುದು purandara vittala. Show all posts
Showing posts with label ಹರಿಹರಿ ನಿನ್ನನು ಒಲಿಸಲುಬಹುದು purandara vittala. Show all posts

Friday, 6 December 2019

ಹರಿಹರಿ ನಿನ್ನನು ಒಲಿಸಲುಬಹುದು purandara vittala

ರಾಗ ಬಿಲಹರಿ ಅಟತಾಳ

ಹರಿ ಹರಿ ನಿನ್ನನು ಒಲಿಸಲುಬಹುದು
ನರಜನರೊಲಿಸೋದು ಬಲು ಕಷ್ಟ ||ಪ||
ಸರಿಬಂದಂತೆ ಆಡುವ ಜನರಿಗೆ
ಕಡೆತನಕಿರುವುದು ಬಲುಕಷ್ಟ ||ಅ||

ಸುಮ್ಮನೆ ಇದ್ದರೆ ಸೇರರು ಸಖರು
ಗಮ್ಮಿನಾತನೆಂತೆಂಬೊ ರುನ್ಮಯದಿಂದ
ಬಹಳನ್ನವನುಂಡರೆ ಭೂತಪ್ರಾಣಿ ಇವನೆಂಬರು
ಕಮ್ಮಿಯುಂಡರೆ ಕಡುಲೋಭಿಯೆಂಬರು
ಉಣದಿದ್ದರೆ ರೋಗಿ ಎಂಬುವರಯ್ಯ ||

ಸುಮ್ಮನೆ ಇದ್ದರೆ ಬಹಳ ಗರುವಿಕೆ ಆತಗೆಂಬರು
ಹೊರಬಿಚ್ಚಾಡಲು ಬಾಯಿಬಡಕನೆಂಬರು
ಆಡದಿದ್ದರೆ ಮೂಕನೆಂಬರಯ್ಯ ||

ಒಗೆದ ವಸ್ತ್ರವನು ಶುದ್ಧಾಗಿ ಹೊದ್ದರೆ
ಸುಳುಶೋಕಿನವನಿವನೆಂಬರು
ನಗೆ ಮಾಸಿದರೆ ಹೇಸಿಯೆಂಬರು
ಹೊದಿಯದಿದ್ದರೆ ಹುಚ್ಚನೆಂಬರಯ್ಯ ||

ಸತಿಯಳ ಸಂಗದಿ ಸೌಖ್ಯದಿಂದಿದ್ದರೆ
ಸಲಿಗೆ ಕೊಟ್ಟ ಕೋತ್ಯೆಂಬರು
ವ್ರತದ ನಾರೇರ ಸಂಗವ ಬಿಟ್ಟರೆ
ನಪುಂಸಕನೆಂತೆಂಬರು
ಅರಿಯದಿದ್ದರೆ ದಡ್ಡನೆಂಬರಯ್ಯ ||

ದಡಬಡಿ ಇದ್ದರೆ ಠೊಣ್ಯನೆಂಬರು
ತೆಳುವಿದ್ದರೆ ರೋಗಿಷ್ಠನೆಂಬರು
ಗಳಿಸಿ ಗಳಿಸಿ ಧನವಂತನಾದರೆ
ಪರರ ಒಡವೆ ಕೈಸೇರಿತೆಂಬರು
ಕಡೆಹಾಯಿಸೊ ಎನ್ನ ಕಠಿನ ಪಂಢರಪುರ-
ದೊಡೆಯ ಶ್ರೀಪುರಂದರವಿಠಲ ಕಡೆದೋರೈ ||
*******