Showing posts with label ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ mahipati. Show all posts
Showing posts with label ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ mahipati. Show all posts

Wednesday, 1 September 2021

ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ankita mahipati

ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ಪ  


ಲೇಸು ಲೇಸಾಯಿತು ನೋಡಿ ಸ್ವಸುಖಗೂಡಿ ಆಶೆ ಪೂರಿಸಿದ ನೋಡಿ ಭಾಸಿ ನೀಡಿ 1 

ಶಿರದಲಿ ಅಭಯನಿಟ್ಟ ಹರುಷವ ಕೊಟ್ಟ ಹರಿದು ಭವಜೀವ ಸುಟ್ಟ ಸ್ಮರಣಿಯೊಳಿಟ್ಟ 2 

ಮಾಯದ ಮೊನೆ ಮುರಿದ ಭಯ ಹರಿದ ಸಾಯೋಜ್ಯಪದ ತೋರಿದ ದಯ ಬೀರಿದ 3 

ಸದ್ವಾಕ್ಯವೆ ಬೋಧಿಸಿದ ಸದ್ಗುಣದ ಸದ್ಭಾವ ಭಕ್ತಿ ತೋರಿದ ಸದ್ಗೈಸಿದ 4 

ಅನುಭವ ಸುಖದೋರಿದ ಸ್ವಾನುಭವದ ಮನವಿಗ್ಯೆನುಕೂಲಾದ ತಾನೆ ತಾನಾದ 5 

ಸವಿಸುಖವನುಣಿಸಿದ ಸುವಿದ್ಯದ ರವಿ ಕೋಟಿ ಪ್ರಭೆಯ ತೋರಿದ ಅವಿನಾಶದ 6 

ತರಳ ಮಹಿಪತಿ ಪ್ರಾಣ ಗುರುನಿಧಾನ ಹರುಷಗೈಸಿದ ಜೀವನ ಪರಮಪಾವನ 7

***