Showing posts with label ಮನಸಿನ ಮಲಿನವ ಮನಸೀಜನೈಯನೆ krishnavittala. Show all posts
Showing posts with label ಮನಸಿನ ಮಲಿನವ ಮನಸೀಜನೈಯನೆ krishnavittala. Show all posts

Monday, 2 August 2021

ಮನಸಿನ ಮಲಿನವ ಮನಸೀಜನೈಯನೆ ankita krishnavittala

ಮನಸಿನ ಮಲಿನವ ಮನಸೀಜನೈಯನೆ

ಹನನ ವೈದಿಸದಿರೆ ಬದುಕುವ ದೆಂತೊ ಪ


ವನಜ ಸಂಭವ ಜನಕ ತನುಮನ ಪ್ರೇರಕ

ಬಿನುಗು ಮಾನವ ನಾನು ಶರಣುಹೊಕ್ಕೆನೈಯ ಅ.ಪ


ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ

ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ

ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ

ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ

ದೀನಜನಮಂದಾರ ಕರುಣೋದಾರ ಮಹಿಮನೆ

ಮಾನಮತ್ತವಮಾನ ನಿನ್ನಾಧೀನ ವಲ್ಲವೆ

ತನುಮನೇಂದ್ರಿಯ ನಾಥ ನಾಯಕ

ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1


ನೋಡಬಾರದ ನೋಟ ನೋಡಿ ಆಯಿತು ಜೀಯ

ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ

ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ

ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು

ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು

ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ

ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ

ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2


ಮುಂದು ಮಾಡುತ ಹಿಂದೆ

ಹಿಂದು ಮಾಳ್ವರೆ ಇಂದು ಕಂದನಲ್ಲವೆ ನಾನು

ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ

ಎಂದಿಗಾದರು ಸಾಧ್ಯವಾಹುದೆ ನನಗೆ

ತಂದೆ ಜಯಮುನಿವಾಯು ಹೃದಯಗ

ನಂದಮಯ ಶ್ರೀ ಕೃಷ್ಣವಿಠಲ

ಬಂಧುನೀನೇ ಸರ್ವಕಾಲದಿ ಎಂದು ಸಿದ್ಧವು ನಿಖಿಳ ವಿಶ್ವಕೆ

ಕುಂದುಮಯ ಅಭಿಮಾನ ಮನಸಿಗೆ

ತಂದಿಡದೆಯೆಂದೆಂದು ಸಲಹುತ

ಕುಂದು ಗೈದವನೆಂದು ನುಡಿಯದೆ

ನಿಂದು ನಡಿಸೈ ಮುಂದಿನಾ ಪಥ 3

****