ಕಾಖಂಡಕಿ ಶ್ರೀ ಕೃಷ್ಣದಾಸರು
ಹೆಳೆಲೆ ಸಖಿ ಘಮ್ಮನೆ ಸುಳಿದವನಾರೇ | ಕೇಳಮ್ಮ ಒಮ್ಮಿಂ ದೊಮ್ಮೆಲೆ ಕಂಡೆ ನಾನೀರೆ | ಒಲಿದು ಕರೆ ತಂದೆನಗಿನ್ನೊಮ್ಮೆ ದೋರೇ | ಚಲುವಿಕೆಯವನ ಉಸುರಲಾರೆ ಪ
ಪದುಮ ಶಂಖ ಚಕ್ರಾಂಕಿ ತರುಣ ತಳದಾ | ಬಿದಿಗೆ ಚಂದ್ರಮನ ನೀಲಮಣಿಯಂತೆ ಹರಡಿನ ಪಾದಾ | ಚದುರ ನೂಪುರ ಗೆಜ್ಜೆ ರವದಾ 1
ಜಾನೂರು ಪೋಂಬಾಳೆ ಕಟಿ ತಟಾ | ಸುನಾಭಿ ತ್ರಿವಳಿಯ ಕೂಟಾ 2
ಕಿರಿಡೊಳ್ಳು ಮಧ್ಯ ಯಳೆ ವಾಸೆ ಹೃದಯಲಿ ಪದಕಾ | ಸಿರಿವತ್ಸ ಗ್ರೀವ ಕರ ಕಡಗ ತೋಳ ಬಂದಿ ಕುಂಡಲ ರನ್ನನೇಕಾ 3
ಕುರು ಮರಿಯಂದದಿ ಕದಪಿನಮುಖಾ | ಕಿರುನಗೆ ದಂತಾರ ನಯನ ಭ್ರೂತಿಲಕಾ | ನೊಸಲು ಕಸ್ತೂರಿ ತಿಲಕಾ 4
ತೆರಳಿದ ಬೆರಳುಂಗುರ ಸನ್ನೆ ಮಾಡುತಾ | ಗುರು ಮಹಿಪತಿ ನಂದನ ಪ್ರಭುನಿವಸತ್ಯ | ಧರಿಯೋಳಳಿವನ ಗಾಣಿ ಪರತಾ 5
***