..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಬಾರೋ ಬೇಗ ತೋರೋ ಮುಖವನು ನಿನ್ನ
ಬಾರಿಗೆ ಬಿದ್ದೆನು ಪಾರಗಾಣಿಸೊ ಪ
ಅಂಗಜನಯ್ಯಾ ಭುಜಂಗ ಶಯನಾ ಶ್ರೀ
ರಂಗ ಎನ್ನಾ ಅಂತರಂಗಕ್ಕೆ ನೀ 1
ಕಂಜಲೋಚನ ನಾ ನಿನಗಂಜಲಿ ಮುಗಿಯುವೆ
ಕುಂಜರೇಶ ವರದ ಭುಜಂಗ ಶಯನ2
ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ
ಸನ್ನ ಪ್ರಾಣನಾಥ ವಿಠಲರಾಯನೆ 3
***