Showing posts with label ಬಾರೋ ಬೇಗನೆ ಬಾದರಾಯಣ ನಿನ್ನ indiresha. Show all posts
Showing posts with label ಬಾರೋ ಬೇಗನೆ ಬಾದರಾಯಣ ನಿನ್ನ indiresha. Show all posts

Thursday, 15 April 2021

ಬಾರೋ ಬೇಗನೆ ಬಾದರಾಯಣ ನಿನ್ನ ankita indiresha

 ರಾಗ -  :  ತಾಳ - 


ಬಾರೋ ಬೇಗನೆ ಬಾದರಾಯಣ ನಿನ್ನ 

ಸಾರುವೆ ಸಂತತ ll ಪ ll


ಗ್ರಂಥಗಳನು ತೋರಿಸು ತವ ಸುಸ್ಮಿತ ವದನ

ದೇಹಗಾರದೊಳಗೆ ತಪ್ಪಿಸಭಿಮಾನ ll ಅ ಪ ll


ಬಾದರಿ ಸುಖ ವಲಜೆ ಮುನಿತವ ಪೂರ್ಣ-

ಬೋಧ ವೈಶಂಪಾಯನ ಮುನಿ

ಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-

ಗಾಧ ಮಹಿಮೆ ತೋರಿಸೋ ll 1 ll


ವೃಂದ ಚಕೂತ ಮುನಿಗಳಿಗೆ ಸುಖ

ಸಂದೋಹದಾರ್ಥ ಪೇಳುತಿರಳು

ಬಂದ ಸಂಶಯ ಹರಿಸುತ ಬೇಗ ಮಹಾ-

ನಂದ ನೀಡಿದಿ ಕೇಳಿದವರಿಗೆ ll 2 ll


ಸತ್ಯವತಿಯ ಸುಕುಮಾರನೆ 

ಧಾತ್ರಿಯೊಳಗೆ ಪುಣ್ಯಚರಿತನೆ

ಸುತ್ತಮುತ್ತಲೂ ಶೇಷಶಯ್ಯನೆ ಎನ್ನ

ನೇತ್ರಕ್ಕೆ ಪೊಳಿ ಇಂದಿರೇಶನೆ ll 3 ll

******