..
kruti: tandevaradagopala vittala (ಪ್ರಹ್ಲಾದಗೌಡರು)
ಭ್ರಮೆಯ ಪುಟ್ಟಿಸಬೇಡ ಭಾವಿ ಭಾರತೀಶಾ ಪ
ಭೂತರಾಜರ ದಾತ ಭವದಿ ಪ್ರಖ್ಯಾತ ಅ.ಪ.
ಕೃತ ಪ್ರತೀಕದಿ ನಿಂದು ನಾಮರೂಪವ ಧರಿಸಿ ನಿರುತತ್ವದ್ದಾಸರಿಂದ ಪೂಜೆಯಾ ಗೊಂಬೀಮನ ಪಾಶದಿಂ ಬಿಗಿದೆನ್ನ ಮನಶೆಳೆಯುತಿಹರೈ ಕೃತಿರಮಣನ ಪ್ರೀಯನಿನ್ನ ಕೃತ್ಯಗಳಿಗೆ ನಮೋ ನಮೋ ಎಂಬೆನಲ್ಲದೆ 1
ಭೂರಮಣ ಭಜಕ ನಿನ್ನ ಭಾಗ್ಯಕ್ಕೆಣೆಯುಂಟೆ ಭಸ್ಮಧರ ಸುರಪರೆಲ್ಲಾ ಪಾದ ಭಸಮಾಗಿ ಬಿದ್ದಿಹರೈಅಸ್ಮದಾದಿ ಜೀವರಿಗೆ ಗೋಚರಿಸೋದುಂಟೆ ಕುಸುಮ ಶರವೈರಿ ಪದ ಪಿತನೆ 2
e್ಞÁನವಿಲ್ಲದೆ ಮಧ್ಯe್ಞÁನ ಶರಧಿಯೊಳು ಮುಳುಗಿ ದೂರಾದೆನೋ ರಾಯಾನಿನ್ನ ವಿಷಯ ವಿರಕ್ತಿ ಅನ್ಯ ವಿಷಯ ಸುಭಕ್ತಿಯಿಂದ ನಿಜಭಕ್ತಿಗಾಣೆನೋಭಕುತಿರಮಣನೇ ನಿನ್ನ ಯುಕುತಿಗಳಿಗಭಿವಂದಿಪೆ ತಂದೆವರದಗೋಪಾಲವಿಠಲನ ತೋರಿಸೋ ಜೀಯಾ 3
***