..
ಬೋಧರೂಪನೆ ವೇದವೇದ್ಯನೆ ಬೇಗ ಮೋಕ್ಷವನೀವನೇ
ವೇದತಸ್ಕರನಂ ವಿಭಂಜಿಸಿ ವೇದಮಂತ್ರವ ತಂದನೇ ಪ
ಮೋದದಿಂದಗವನ್ನು ಬೆನ್ನಲಿ ಮಂತ್ರಪೊತ್ತ ದೇವನೆ ಪೋಷಿಸೈ
ಸಾದರಂಮಿಗೆ ರಂಗನಾಥನೆಸಂತತಂ ನುತಿಗೈದಪೆಂ ಅ.ಪ
ಮಂಗಳಾಂಗ ವಿಹಂಗ ರಾಜತುರಂಗ ಸನ್ಮುನಿ ಸಂಗಮಾ
ತಂಗ ರಕ್ಷ ಹಿರಣ್ಯ ಲೋಚನದರ್ಪಶಿಕ್ಷಲ ಸತ್ಕøಪಾ
ಪಾಂಗ ದೈತ್ಯತನೂಭವೇಷ್ಟದ ತುಂಗ ಶೌರ್ಯ ವಿಶಿಷ್ಟ ಶ್ರೀ
ರಂಗನಾಥನೆ ರಕ್ಷಿಸೈ ಭವದಂಘ್ರಿಸೇವೆಯೊಳಾವಗಂ1
ಸುಂದರಾಂಗನೆ ಸೂರಿವಂದ್ಯನೆ ಕುಂದಕುಟ್ಮಲದಂತನೇ
ಮಂದಹಾಸದೊಳೊಂದಿ ಬಾಲಕನಂದದಿಂದಲಿ ಬಂದು ಸಾ
ನಂದದಿಂಬಲಿಯಿಂದಭೂಮಿಯನಂದುದಾನವಕೊಂಡಗೋ
ವಿಂದಪೋಷಿಸುರಂಗನಾಥಮುಕುಂದನೀಂ ಪರಿತೋಷದಿಂ2
ರಾಮ ತಾಮರಸೋದ್ಭವಸ್ತುತನಾಮ ಸದ್ಗುಣಧಾಮ ಶ್ರೀ
ರಾಮಕೃಷ್ಣ ದಿನೇಶಮಂಡಲಧಾಮದೀನಶರಣ್ಯ ನಿ
ಷ್ಕಾಮ ಸಂಗರಭೀಮ ದೈತ್ಯವಿರಾಮ ಸುಂದರಕಾಮ ಸು
ತ್ರಾಮವಂದ್ಯನೆ ರಂಗನಾಥನೆ ರಕ್ಷಿಸೆನ್ನನು ಮೋದದಿಂ3
ಧೀರಬುದ್ಧನೆ ಕಲ್ಕಿರೂಪನೆ ಧೀರಸಂಕುಲದಿವ್ಯಮಂ
ದಾರ ನಿನ್ನನೆ ಬೇಡಿಕೊಂಬೆನು ಘೋರಸಂಸ್ಕøತಿಬಂಧದಿಂ
ಗಾರುಮಾಡಿಸದಿನ್ನು ಮಾತೆಯಗರ್ಭಕೆಂದಿಗುತಾರದೆ
ಪಾರಗಾಣಿಸಿ ರಂಗನಾಥನೆ ಪಾಲಿಸೈ ಬಿಡದಳ್ಕರಿಂ 4
***
****