Showing posts with label ಶ್ರೀನಿವಾಸ ವಾಸವಿಸೂನು ಪತಿ ತ್ಯಜನೆ ತಥ ಚರಣಪಾಣಿ vijaya vittala. Show all posts
Showing posts with label ಶ್ರೀನಿವಾಸ ವಾಸವಿಸೂನು ಪತಿ ತ್ಯಜನೆ ತಥ ಚರಣಪಾಣಿ vijaya vittala. Show all posts

Thursday, 17 October 2019

ಶ್ರೀನಿವಾಸ ವಾಸವಿಸೂನು ಪತಿ ತ್ಯಜನೆ ತಥ ಚರಣಪಾಣಿ ankita vijaya vittala

ವಿಜಯದಾಸ
ಶ್ರೀನಿವಾಸ ವಾಸವಿಸೂನು ಪ

ಪತಿ ತ್ಯಜನೆ ತಥ
ಚರಣಪಾಣಿ ಪರಮಾನಂದಾ
ಚರಣಾಯುಧನಾದವಗೆ ಸೋಕಿದಳ
ಚರಣದಿ ಪಾವನಗೈಸಿದೆ ದೇವಾ1

ಪತಿ ಗುರು ಪಿತೃ ಪಿತಾಮಹಾ ದೈ
ವತ ಗುರೋರ್ಗುರು ಸ್ವಶುರ ಜಾರಾ
ಅತಿಶಯ ಭೂತಿರಭೂತಿ ಎಂದು ಸಂ
ತತ ಉಪಾಸ್ಯತನಾಗಿ ಮೆರೆವನೆ 2

ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ
ಪಂಚ ರೂಪದಿ ಕೊಂಬನಾಡಿಸ್ಥ
ಪಂಚಜನ ಪಂಚಮೊಗವೇಶ ತಾಳಿದ
ಪಂಚ ಕುಸುಮಸಾರ ಮಧು ವಿದ್ಯಮೂರ್ತಿ 3

ಹೃದಯಾಖ್ಯಪುರ ಪಂಚದ್ವಾರದಲಿ ನೀ
ವಿಧಿ ಭವರಿಂದಾರ್ಚನೆ ಗೊಂಬೆ
ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ
ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ 4

ಗುಣಪೂರ್ಣ ಐಶ್ವರ್ಯಾನಂತ ಮೋದಾ
ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ
ಎಣಿಸುವೆ ಷÀಟುಚತು ತ್ರಿಭಿರೂಪಾತ್ಮಾ5

ಪದ್ದುಮ ಶಾಂತಸಿಂಹ ಅನಿರುದ್ಧ
ಪ್ರದ್ಯುಮ್ನ ಸಂಕರುಷಣ ವಾ
ಸುದೇವ ನಾರಾಯಣ ರೂಪಗಳಿಂದ
ಹೃದ್ಗತನಾಗಿ ಒಪ್ಪುವ ಮಹಾಮಹಿಮಾ 6

ಗೋಕುಲನಾಥ ಗೋವಿಂದ ತಿರುಮಲ
ಕಾಕೋದರಾದ್ರಿನಿಲಯ ಸ್ವಾಮಿ
ಸಿರಿ ವಿಜಯವಿಠ್ಠಲ ಪ
ರಾಕು ಈ ರಥದೊಳು ಕುಳ್ಳಿ ವೇಗಸಾಗಿ7
*********