..
ಬಾರೈಯ್ಯಾ ಬಾರೈಯ್ಯಾ
ಭಾರತಿ ಚಿತ್ತ ಚಕೋರ ಶಶಾಂಕಾ ಪ
ಹೇಸಿ ಸಂಸಾರದ ಕ್ಲೇಶ ಕಳೆದು ತವ
ದಾಸ ಜನರ ಸಹವಾಸವ ನೀಡಲು 1
ಹನುಮ ಭೀಮ ಮುದ | ಮುನಿವರ ಹರಿಪದ
ನೆನೆಯುವ ಭಾಗ್ಯವ | ಅನುದಿನ ಗರೆಯಲು 2
ವಾತಜ ನಿನ್ನಯ ದೂತರು ನಾವೈ
ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು 3
ಭಾವ ಭಕ್ತಿಯಲಿ | ಸೇವಿಪರಿಗೆ ಸುಖ |
ವೀವ ದೇವಗುರು | ಛಾವಣಿ ನಿಲಯಾ 4
ತಂದೆ ನೀನೊಲಿದರೆ | ನಂದಜ ಶಾಮ
ಸುಂದರ ಸಲಹುವನೆಂದು ಪ್ರಾರ್ಥಿಪೆವು 5
***