Showing posts with label ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭಗೆ purandara vittala KALAVU KALISIDYAMMA GOPI KAMALANAABHAGE. Show all posts
Showing posts with label ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭಗೆ purandara vittala KALAVU KALISIDYAMMA GOPI KAMALANAABHAGE. Show all posts

Sunday, 7 November 2021

ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭಗೆ purandara vittala KALAVU KALISIDYAMMA GOPI KAMALANAABHAGE



ಕಳವು ಕಲಿಸಿದೆಮ್ಮ ಗೋಪಿ ಕಮಲನಾಭಗೆ ||ಪ||
ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲುಬೆಣ್ಣೆಯ ||ಅ||

ಆರು ಏಳಾದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ
ಗೀರುಗಂಧವ ಹಚ್ಚಿ ಹಾರವ ಹಾಕಿ
ಕೇರಿ ಕೇರಿ ಪಾಲು ಬೆಣ್ಣೆ ಸೂರೆ ಮಾಡೀ ಬಾರೆನ್ನುತ
ವಾರಿಜನಾಭನ ಕಳುಹಿದ್ಯಮ್ಮ ವನಜನಯ್ಯನ ||

ಚಿತ್ತಜನಯ್ಯನ ಕೈಲಿ ಚಿನ್ನದ ಚೆಂಡನೆ ಕೊಟ್ಟು
ಅರ್ತಿಯಿಂದ ಶೃಂಗರಿಸಿ ಆಡಿ ಬಾರೆಂದು
ಕತ್ತಲೆ ಬೀದಿಯ ಸುತ್ತೆ ಕಸ್ತೂರಿತಿಲಕವನಿಟ್ಟು
ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ ||

ಸಣ್ಣ ಮಲ್ಲಿಗೆಯ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ
ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ
ಹುಣ್ಣಿಮೆ ಮೀಸಲಪಾಲು ಉಣ್ಣು ಮೆಲ್ಲು ಮೆಲ್ಲೆನುತ್ತ
ಚಿಣ್ಣನ ಕಳುಹಿದ್ಯಮ್ಮ ಉಣ್ಣನಿಕ್ಕದೆ ||

ವಾರಿಜನಾಥ ಮಾಡಿದಂಥ ದೂರು ಹೇಳಿದರೆ ನಿಮಗೆ
ಬಾಯಿಬಡಕರೆಂದು ಗೋಪಿ ಬೈವೆ ನಮ್ಮನು
ಊರು ಮಾಡಿದ ಕೊಳಗ ತಾಯಿ ಮಾಡಿದ ಹೊಟ್ಟೆ
ವಾರಿಜನಾಭನ ಕರೆದು ಗೋಪಿ ಬುದ್ಧಿಯ ಹೇಳೆ ||

ಹೊಟ್ಟೆಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ
ಇಟ್ಟುಕೊಂಡು ಈರೇಳು ಭುವನ ಉದರದಲ್ಲಿಯೆ
ಎಷ್ಟು ಹೇಳಿದರು ಕೇಳ ಏನು ಮಾಡಲಮ್ಮ ನಾನು
ಕಟ್ಟು ಮಾಡಿಸಲು ಬೇಕು ಪುರಂದರವಿಠಲಗೆ ||
****

Kalavu kalisidyamma gopi kamala nabhanige|
Ulisikondya nimma maneya paalu benneya || a.p||

Aaru elalu munna ebisi shringara madi 
geeru gandhava hacchi haarava haaki |
Keri keri paalu benne surey Maadi baarennuta , Varijanabhana kaluhidyamma vanaja nayanana || 1 ||

Sanna malligeya mudisi bannada valliya todisi, Hennu gala olisuvante heli budhiya |
Hunnimeya misalu paalu mellu mellu mellannuta, chinnana kaluhidyamma unnalikke || 2 ||

Hottebaakanaadanivanu bettadodeyage priya, Ittukondirelu bhuvana udaradalliye |
Eshtu helidaru kela enu maadalamma nanu
Kattu maadisalubeku purandara vitthala || 3 ||
***

pallavi

kaLavu kalisidemma gOpi kamalanAbhake

anupallavi

uLisi koNDya nimma maneya pAlu beNNeya

caraNam 1

Aru Elada munna ebbisi shrngAra mADi gIru gandhava hacci hArava hAki
kEri kEri pAlu beNNe sure mADi bArennuta vArijanAbhana kaLuhidyamma vanaja nayana

caraNam 2

citta janayyana kaili cinnada ceNDena koTTu artiyinda shrngarisi Adi bArendu
kattale bhItiya sutte kastUri tilakavaniTTu nityAnandage niluvu gannaDiya tOri

caraNam 3

saNNa malligeya muDisi baNNada valliya hoDisi heNNUgaLa olisuvande hELi buddhiya
huNNime mIsala pAlu uNNu mellu mellanutta ciNNaNa kaLuhideyamma uNNalikkade

caraNam 4

vArijAkSa mADidanda dUru hELidare nimage iTTU koNDu irELu udaradalliye
Uru mADida koLaga tAyi mADida hoTTe vArijanAbhana karedu gOpi buddhiya hELe

caraNam 5

hoTTe bAganAdanivu beTTadoDeyage priya iTTu koNDu IrELu udaradalliye
eSTu hELidaru kELa Enu mADalamma nAnu kaTTu mADisalu bEku purandara viTTalage
***


ರಾಗ ಧನಶ್ರೀ , ಅಟತಾಳ (raga, taala may differ in audio)
 ರಾಗ ಭೀಮ್ ಪಲಾಸ್        ಆದಿತಾಳ 

ಕಳವು ಕಲಿಸಿದ್ಯಮ್ಮ ಗೋಪಿ ಕಮಲನಾಭನಿಗೆ ॥ ಪ ॥
ಉಳಿಸಿಕೊಂಡ್ಯ ನಿಮ್ಮ ಮನೆಯ ಪಾಲು ಬೆಣ್ಣೆಯ ॥ ಅ ಪ ॥

ಆರು ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ ।
ಗೀರು ಗಂಧವ ಹಚ್ಚಿ ಹಾರವ ಹಾಕಿ ॥
ಕೇರಿಕೇರಿಲಿ ಪಾಲು ಬೆಣ್ಣೆ ಸೂರೆ ಮಾಡಿ ಬಾ ಎನ್ನುತಾ । 
ವಾರಿಜನಾಭನ ಕಳುಹಿದ್ಯಮ್ಮ ವನಜನಯನನಾ ॥ 1 ॥

ವಾರಿಜನಾಭ ಮಾಡಿದಂಥ ದೂರು ಹೇಳಿದರೆ ನಿಮಗೆ ।
ಬಾಯಿ ಬಡುಕರೆಂದು ಗೋಪಿ ಬೈವೆ ನಮ್ಮನು ॥
ಊರು ಮಾಡಿದ ಕೊಳಗ ತಾಯಿ ಮಾಡಿದ ಹೊಟ್ಟೆ ।
ವಾರಿಜನಾಭನ ಕರೆದು ಗೋಪಿ ಬುದ್ಧಿ ಹೇಳೆ ॥ 2 ॥

ಹೊಟ್ಟೆಬಾಕನಾದನಿವನು ಬೆಟ್ಟದೊಡೆಯಗೆ ಪ್ರಿಯ । ಇಟ್ಟುಕೊಂಡು ಈರೇಳು ಭುವನ ಉದರದಲ್ಲಿಯೇ ॥
ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು ।
ಕಟ್ಟು ಮಾಡಿಸಲು ಬೇಕು ಪುರಂದರವಿಠಲಗೆ ॥ 3 ॥
*******

ಪುರಂದರದಾಸರು

ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪ

ಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1

ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2

ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3

ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4

ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
******