..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಎನ್ನನುದ್ಧರಿಸಲು ಘನ್ನ ಬಿರುದುಗಳು ಪ
ಇನ್ನು ಉನ್ನತವಾಹವು ಕೇಳೊ ಹರಿಯೆ ಅ.ಪ
ಅನವರತದಿ ದುರ್ವಿಷಯ ಲಂಪಟದೊಳು
ಚನ್ನಾಗಿ ಪತಿತ ಎನ್ನಂತಜಾಮಿಳನೆ
ಇನ್ನಿದು ತಿಳಿದು ನೀ ಎನ್ನ ಪೂತನ ಮಾಡೆ
ನಿನ್ನನಿಮಿತ್ತ ಬಂಧುತನವೆ ವೆಗ್ಗಳವೊ 1
ಮನ್ನಿಸಿದವನಲ್ಲ ಪೂಜಿಸಲಿಲ್ಲ
ತನ್ನ ಸಂಬಂಧಿಯು ಮೊದಲಿಗನಲ್ಲ
ಎನ್ನಂತೆ ಗಜೇಂದ್ರನೆ ಎನ್ನನುದ್ಧರಿಸಲು
ನಿನ್ನ ಪತಿತಪಾವನತೆ ಘನ್ನವೊ 2
ಏಸಪರಾಧ ಮಾಡಿದ ಚೈದ್ಯಾದಿಗಳು
ಈಸಪರಾಧ ರಾಶಿಗಳ ಮಾಡಿದರೆ
ವಾಸುದೇವವಿಠಲ ಎನ್ನ ರಕ್ಷಿಸಲು
ಸೂಸುವುದೋ ನಿನ್ನ ಭಕುತ ವಾತ್ಸಲ್ಯತನವೊ 3
***