Showing posts with label ಭಕ್ತಿಲೇಸು ಮುಕ್ತಿಗಿಂತಲಿ ಭಕ್ತಿಲೇಸು ಮುಕ್ತಿಗಿಂತಲಿ gurumahipati. Show all posts
Showing posts with label ಭಕ್ತಿಲೇಸು ಮುಕ್ತಿಗಿಂತಲಿ ಭಕ್ತಿಲೇಸು ಮುಕ್ತಿಗಿಂತಲಿ gurumahipati. Show all posts

Wednesday, 1 September 2021

ಭಕ್ತಿಲೇಸು ಮುಕ್ತಿಗಿಂತಲಿ ಭಕ್ತಿಲೇಸು ಮುಕ್ತಿಗಿಂತಲಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಭಕ್ತಿಲೇಸು ಮುಕ್ತಿಗಿಂತಲಿ ಪ 


ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 

ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 

ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 

ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4

***