Showing posts with label ಬಂದೆ ರಂಗಯ್ಯ ನಿನ್ನಬಳಿಗೆ ನೊಂದು ಮನ ಬೇಡುವೆ prananatha vittala. Show all posts
Showing posts with label ಬಂದೆ ರಂಗಯ್ಯ ನಿನ್ನಬಳಿಗೆ ನೊಂದು ಮನ ಬೇಡುವೆ prananatha vittala. Show all posts

Thursday, 5 August 2021

ಬಂದೆ ರಂಗಯ್ಯ ನಿನ್ನಬಳಿಗೆ ನೊಂದು ಮನ ಬೇಡುವೆ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಬಂದೆ ರಂಗಯ್ಯ ನಿನ್ನಬಳಿಗೆ ಪ


ನೊಂದು ಮನ ಬೇಡುವೆ ನಿನ್ನ ಶ್ರೀಪಾದಂಗಳಿಗೆ ಅ.ಪ 


Àಕ್ತಜನರು ಬಂದು ಕಾಡುವರೆಂತೆಂದು

ಯುಕ್ತಿಯಿಂದಿಲ್ಲಿ ಬಂದು

ಸಪ್ತಬೆಟ್ಟದ ಮಧ್ಯದೊಳ್ ವಿ

ರಕ್ತಿಯ ಕೈಕೊಂಡು ನಿಂತಿರೆ

ಮುಕ್ತಿದಾಯಕ ನಿನ್ನ ನಂಬಿದ

ಭಕ್ತರ ಪಾಡೇನು ಪೇಳೆಲೊ 1


ಶ್ವೇತಾದ್ರಿಯಲಿ ಭಕ್ತವ್ರಾತ ಪಾಲಿಸಿದಂಥಾ

ಪ್ರೀತಿವಚನ ಕೇಳಿ

ಭೂತನಾಥನ ಭಯವ ಬಿಡಿಸಿ

ಖ್ಯಾತಿಯನು ಪಡೆದಂಥ ವಾರ್ತೆಯ

ರೀತಿಯನು ನಾ ಕೇಳಿ ಬಂದೆನೊ

ಮಾತುಳಾಂತಕ ಮಾರಮಣ ಹರೇ 2


ದೀನವತ್ಸಲ ಶ್ರೀರಂಗ ನಿನ್ನಯ ಪಾದ

ಧ್ಯಾನ ಮಾಡುವರ ಸಂಗವಿತ್ತು

ಮಾನನಿಧಿ ಪ್ರಾಣನಾಥ ವಿಠಲನೆ

ಸಾನುರಾಗದಿ ಸಲಹೊ ಎನ್ನನು

ದೀನನಾದ ಗಜೇಂದ್ರನ ಬಹು

ಮಾನದಿಂದಲಿ ಕಾಯ್ದ ಪ್ರಭುವೆಂದು ಬಂದೇ 3

***