Showing posts with label ಅತಿ ದಯಾಪರಮೂರ್ತಿ ಅನಿಮಿತ್ತ ಬಂಧು ರಘುಪತಿ ವಿಠ್ಠಲ vyasa vittala raghupati vittala dasa stutih. Show all posts
Showing posts with label ಅತಿ ದಯಾಪರಮೂರ್ತಿ ಅನಿಮಿತ್ತ ಬಂಧು ರಘುಪತಿ ವಿಠ್ಠಲ vyasa vittala raghupati vittala dasa stutih. Show all posts

Saturday, 1 May 2021

ಅತಿ ದಯಾಪರಮೂರ್ತಿ ಅನಿಮಿತ್ತ ಬಂಧು ರಘುಪತಿ ವಿಠ್ಠಲ ankita vyasa vittala raghupati vittala dasa stutih

 ಅಂಕೀತೋಪದೇಶ : ಶ್ರೀ ವ್ಯಾಸ  ವಿಠ್ಠಲರು ( ಶ್ರೀ ಕಲ್ಲೂರು ಸುಬ್ಬಣ್ಣದಾಸರು )

ಅಂಕಿತ : ಶ್ರೀ ರಘುಪತಿ ವಿಠ್ಠಲ

" ಅಂಕಿತ ಪ್ರದಾನ ಪದ "


ರಾಗ : ಕಾಂಭೋಧಿ      ತಾಳ : ಝ೦ಪೆ


ಅತಿ ದಯಾಪರಮೂರ್ತಿ । ಅನಿ ।

ಮಿತ್ತ ಬಂಧು । ರಘು ।

ಪತಿ ವಿಠ್ಠಲ ಸಲಹೋ ಇವನಾ ।। ಪಲ್ಲವಿ ।।


ಪತಿತ ಪಾವನ ನಿನ್ನ ಪರಮ ಮಂಗಳ ನಾಮ ।

ಸತತ ಪೊಗಳುವಂತೆ ಸಾನುಕೂಲನಾಗಿ ।। ಅ ಪ ।।


ಜನನಿ ಗರ್ಭದಲಿಂದ ಜನಿಸಿದ ಮೊದಲು ಮಾಡಿ ।

ಗುಣವಂತ ನೆನೆಸಿದವನೋ ।

ಕನಸಿನೊಳಗಾದರೂ ಧನ ವನಿತೆ ತನು ಭೋಗ ।

ನೆನಸದಿಹ ನಿಪುಣನಿವನೋ ।।

ಕ್ಷಣಕ್ಷಣಕೆ ನಿನ್ನನೇ ಧ್ಯೇನಿಸುತ ಪರಮ ಸುಖ ।

ವನಧಿಯೊಳಗಾಡುವನೋ ।

ಪ್ರಣತ ಜನ ಮಂದಾರ ಪ್ರಾಣನಂತರ್ಯಾಮಿ ।

ನಿನಗೆ ಸಮ್ಮತವಾದ ನಿಜ ದಾಸನ ಮ್ಯಾಲೆ ।। ಚರಣ ।।


ಶೀತೋಷ್ಣ ಸುಖ ದುಃಖ ಮಾನಾಪಮಾನಗಳು ।

ಮಾತು ಮನಸಿಗೆ ತಾರನೋ ।

ಧಾತುಗೆಡದಲೆ ತಿಳಿದು ದಯಾ ಪಯೋನಿಧಿ ನಿನ್ನ ।

ಪ್ರೀತಿಯೆಂದಾಡುವವನೋ ।।

ವಾತಜನ ಮತದವರ ಪ್ರೀತಿಯಲಿ ಸೇವಿಸಿ । ಕೃ ।

ಪಾತಿಶಯ ಪಡದಣುಗನೋ ।

ಈ ತೆರದಿ ಭಕ್ತನ್ನ ರೀತಿ ನೀ ಬಲ್ಲವನೇ ।

ನಾ ತುತಿಸಿ ಪೇಳ್ವ ಪೊಸಮಾತು ಮತ್ತುಂಟೆ ।। ಚರಣ ।।


ನಿನ್ನ ಕರುಣದಳತಿ ಇನ್ನಿವನಮ್ಯಾಲಿರಲು ।

ಚನ್ನಿಗನೆ ನಿನಗೆ ನಾನೂ ।

ಬಿನ್ನೈಸಿದೆನೋ ಸ್ವಾಮಿ ಎನ್ನ ಗುರುಗಳ ಆಜ್ಞ ।

ಚನ್ನಾಗಿ ಶಿರದಿವೊಹಿಸಿ ।।

ಸಣ್ಣವಗೆ ಅಂಕಿತವ ಕೊಟ್ಟನಲ್ಲದೆ ಲೇಶ ।

ಎನ್ನ ಸ್ವತಂತ್ರವಿಲ್ಲ ।

ಚನ್ನಾಗಿ ಕಾಪಾಡಿ ಬೆಳಸಿ ಫಲವನೇ ತೋರೋ ।

ಸನ್ನುತಾಂಗಿಯರಮಣ ವ್ಯಾಸ ವಿಠ್ಠಲವಿಭುವೇ ।। ಚರಣ ।।

****