audio by vidwan sumukh moudgalya
ಶ್ರೀವಿದ್ಯಾಪ್ರಸನ್ನತೀರ್ಥರು ಶ್ರೀವಿದ್ಯಾವಾರಿಧಿತೀರ್ಥರನ್ನು ಕುರಿತು ರಚಿಸಿರುವ ಕೃತಿ
ರಾಗ : ಧನ್ಯಾಸಿ ಆದಿತಾಳ
ಕೋರುವೆ ಗುರು ವಿದ್ಯಾವಾರಿಧಿತೀರ್ಥರ
ಭೂರಿ ದಯವ ಸತತ ॥ಪ॥
ಧೀರ ವರೇಣ್ಯ ಸಮೀರ ಸಮಯಗಳ
ಸಾರವನರಿಯುವ ಸೇವೆಯ ಕಾಣಲು ॥ಅ.ಪ॥
ವ್ಯಾಸರಾಜ ಗುರು ದಾಸರೆಂದೆನಿಸಿ
ಶ್ರೀಶ ಶ್ರೀಕೃಷ್ಣನ ತೋಷಿಸಲು
ಸಾಸಿರ ವಿಧದಲಿ ಸಲಿಸಿ ಸೇವೆಗಳ
ಭಾಸುರ ಕೀರುತಿ ಪಡೆದ ಯತಿವರ ॥೧॥
ಅಂದದ ನವಮಣಿ ಮಂದಿರಗಳ ಲಿ
ನಂದಕುಮಾರನ ಕುಳ್ಳಿರಿಸಿ
ಚಂದದಿ ದಿನ ದಿನ ಪೂಜೆಯ ಗೈದು
ಆನಂದ ಸಾಗರದಿ ಮಿಂದ ಯತಿವರ ॥೨॥
ಘನ್ನ ಮಹಿಮೆ ಸುಖ ಚಿನುಮಯ ರೂಪ
ಪ್ರಸನ್ನ ಶ್ರೀಕೃಷ್ಣಗೆ ಹರುಷದಲಿ
ಚಿನ್ನುಮಯದ ತೊಟ್ಟಿಲನ್ನು ಸೇವೆ ಮಾಡಿ
ಅನ್ಯರಿಗಲ್ಲದ ಪುಣ್ಯಪಡೆದವರ
॥೩॥
***