Showing posts with label ದುರಿತ ಉಪಶಮನೆ ಅಮಮ ಮಂದಗಮನೆ vijaya vittala. Show all posts
Showing posts with label ದುರಿತ ಉಪಶಮನೆ ಅಮಮ ಮಂದಗಮನೆ vijaya vittala. Show all posts

Thursday, 17 October 2019

ದುರಿತ ಉಪಶಮನೆ ಅಮಮ ಮಂದಗಮನೆ ankita vijaya vittala

ದುರಿತ ಉಪಶಮನೆ | ಅಮಮ ಮಂದಗಮನೆ ||
ಅಗಣಿತ ಸುಮನೆ ಪ

ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ |
ಕಾಮಿತ ಸುಫಲದಾಯೆ ಕಾಲನಿಭ ಕಾಯೆ |
ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ |
ಸೋಮಕುಲಪಾವನೇ ಶರಣ ಸಂಜೀವನೆ 1

ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ |
ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ |
ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ |
ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ 2

ವಾರಿನಿಧಿ ಪ್ರಥುಕುಗಾಮಿನಿ |
ಹಾರ ಮುಖೆ ಸುಪ್ರಮುಖೆ |
ವೀರಶಕ್ತಿ ವಿಜಯವಿಠ್ಠಲನ |ಕಾರುಣ್ಯಪಾತ್ರೆ ಸಂಗೀತಲೋಲೆ 3
***********