..
kruti by bagepalli shesha dasaru ಬಾಗೇಪಲ್ಲಿ ಶೇಷದಾಸರು
ಪಾಲಿಸಮ್ಮ ಭಾರತಾದೇವಿ ಪ
ಶೀಲಮತಿಯ ಎನಗೆ ಕೊಟ್ಟು ಅ.ಪ
ಭಾರನಿಮ್ಮದಮ್ಮಕಾಯೆ ಮಾರುತಿ ಮನಪೂರ್ಣ ಪ್ರಿಯೆ
ಕೋರುವೆ ನಿನ್ನ ಪಾದವನ್ನು ತೋರಿ ನೀಡೆ ಜ್ಞಾನವನ್ನು 1
ಪಂಚÀಭೇದ ತಾರತಮ್ಯ ಸಂಚಿಂತನೆಯನ್ನೆ ಕೊಟ್ಟು
ಪಂಚಬಾಣನ ಪಿತನ ಚರಿತೆ ವಂಚಿಸದಲೆ ಪೇಳಿಸಮ್ಮ 2
ನಿನ್ನನಂಬಿದ ಭಕ್ತಜನಕೆ ಘನ್ನಸುಖವ ಕೊಟ್ಟು ಪರಕೆ
ಸನ್ನುತಾಂಗ ಶೇಷವಿಠಲನನ್ನು ತೋರಿ ಸಲಹಿದಾಪರಿ 3
***