RSS song .
ಉತ್ಸಾಹ ಚಿಮ್ಮುವ ಹರೆಯದಲಿ
ಗುರಿಗಾಗಿ ಕಾತುರ ಛಲವಿರಲಿ
ಥಳುಕಿನ ಚಂಚಲ ಹರಿವಿನಲಿ
ದೃಢ ನಿರ್ಧಾರದ ನೆಲೆಯಿರಲಿ ||ಪ||
ಯೌವನ ಹೊಮ್ಮುವ ತನುವಿರಲಿ
ಅಂಜಿಕೆ ಅಳುಕು ಕಾಡದಿರಲಿ
ಪ್ರವಾಹದೆದುರು ಸೆಣಸಿನಲಿ
ಅದಮ್ಯ ವಿಶ್ವಾಸ ಹುದುಗಿರಲಿ ||೧||
ತಾರುಣ್ಯ ತೋರುವ ಕನಸಿನಲಿ
ಹೊಸ ವಸಂತದ ಚಿಗುರಿರಲಿ
ಹೊನ್ನ ಕಿರಣದ ಚೆಲುವಿನಲಿ
ಭೂಮಿಯ ಬಳುವಳಿ ನೆನಪಿರಲಿ ||೨||
ತುಡಿಯುವ ತೋಳಿನ ಬೀಸಿನಲಿ
ಸಿರಿಯನು ಸೃಜಿಸುವ ಕಸುವಿರಲಿ
ಮಿಡಿಯುವ ಹೃದಯದ ಹಾಸಿನಲಿ
ಸೇವೆಯ ಆದರ್ಶ ಸೆಲೆಯಿರಲಿ ||೩||
***
utsAha cimmuva hareyadali
gurigAgi kAtura Calavirali
thaLukina caMcala harivinali
dRuDha nirdhaarada neleyirali ||pa||
youvana hommuva tanuvirali
aMjike aLuku kADadirali
pravAhadeduru seNasinali
adamya viSvAsa hudugirali ||1||
taaruNya tOruva kanasinali
hosa vasaMtada cigurirali
honna kiraNada celuvinali
BUmiya baLuvaLi nenapirali ||2||
tuDiyuva tOLina bIsinali
siriyanu sRujisuva kasuvirali
miDiyuva hRudayada hAsinali
sEveya Adarsha seleyirali ||3||
***