Showing posts with label ಕೋಲೆಂದು ಪಾಡಿರೆಕೋಮಲೆಯರೆಲ್ಲ ramesha. Show all posts
Showing posts with label ಕೋಲೆಂದು ಪಾಡಿರೆಕೋಮಲೆಯರೆಲ್ಲ ramesha. Show all posts

Monday, 11 November 2019

ಕೋಲೆಂದು ಪಾಡಿರೆಕೋಮಲೆಯರೆಲ್ಲ ankta ramesha

by ಗಲಗಲಿಅವ್ವನವರು
ಕೋಲೆಂದು ಪಾಡಿರೆಕೋಮಲೆಯರೆಲ್ಲ ಗೋಪಾಲರಾಯನ ಮಡದಿಯರುಕೋಲ ಪ.

ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1

ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2

ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3

ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4

ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
********