..
kruti by Nidaguruki Jeevubai
ಶೇಷಶಯನ ಶ್ರೀಕೃಷ್ಣನಿಗಾರತಿ
ಆ ಸತಿ ಲಕುಮಿಯು ಮಾಡಿದಳು ಪ
ಸಾಸಿರನಾಮನ ಭೂಸುರಪಾಲನ
ಸೋಸಿನಿಂದ ಸ್ಮರಿಸುತ ಮನದಿ ಅ.ಪ
ಅಂಬುಧಿಯುದುಕದಿ ಆಲದ ಎಲೆ ಮೇಲೆ
ಅಂಗುಟವನು ಬಾಯೊಳಗಿಟ್ಟು
ತುಂಬಿಗುರುಳ ಮುಖಕಮಲದ ಚಲುವಗೆ
ಸಂಭ್ರಮದಲಿ ಮುತ್ತಿನಾರತಿಯ 1
ಮಂದರಧರ ಗೋವಿಂದಗೆಮ್ಮಯ
ಕುಂದುಗಳೆಣಿಸದೆ ಸಲಹೆನ್ನುತಾ
ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ
ಇಂದಿರೇಶ ಸಲಹೆಂದೆನುತ 2
ಗೋವರ್ಧನವನು ಎತ್ತಿ ಸುಜನರನು
ಗೋಗೋಪಾಲರ ಪೊರೆದವಗೆ
ಗೋಪತಿ ಕಮಲನಾಭ ವಿಠ್ಠಲನಿಗೆ
ಗೋಪಿಯರೊಡನಾಡುವ ಹರಿಗೆ 3
***