by ಗೋವಿಂದದಾಸ
ಯಾರೆನ್ನ ಕಾಯುವರು | ಶ್ರೀಹರಿಯೆ |ಹರಿಯೇ | ನೀ ದೂರ ಮಾಡುವರೇ ಪ
ಘೋರಪಾತಕವೆಂಬೀ | ಶಾರೀರವನು ಪೊತ್ತು |ಪಾರಗಾಣದ ದುಃಖಕರ್ಹನಾದೆನು ಹರಿಯೆ 1
ಜೀವದಂತ್ಯದಿ ಯಮನೀವ ಪಾಶವ ಕಡಿದುಕಾಯುವರಿಲ್ಲ | ದಯಾಕರ ಮೂರುತಿ 2
ಕಾಸು ಕನಕವಿರಲಾಸೆ ಮಾಡುವರೆಲ್ಲ |ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ 3
ಬಂಧು ಬಳಗವೆಂಬುದೊಂದು | ಸಂಸಾರದಿ |ಬಂದು ನೋಯುವೆನು | ಗೋವಿಂದ ನೀನಲ್ಲದೆ 4
*******