RSS song .
ಭಯವಿರದ ಭಾರತವ ಕಟ್ಟಲೋಸುಗ ಬನ್ನಿ
ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ ||ಪ||
ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ
ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ
ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ
ಮುಂದಾಗಿ ಎದುರಿಸುವ ಕ್ಷಾತ್ರಯೋಧ ||೧||
ದೈನ್ಯವೇತಕೆ ನಿನಗೆ ಮಾನ್ಯ ಭಾರತಿಪುತ್ರ
ಕಪಿಸೈನ್ಯ ಸಾಗರವ ದಾಟಿಲ್ಲವೇನು?
ವೈನತೇಯನು ತಂದ ಪೀಯೂಷವಿರುವಾಗ
ಸಾವೆಂಬ ವಿಷಸರ್ಪಕಂಜಲೇನು? ||೨||
ಭಾರತದ ಬಹುಳತೆಗೆ ಹಿಂದುತ್ವವಡಿಪಾಯ
ಮರೆಯದಿರು ಮುರಿಯದಿರು ಸೇತುಬಂಧ
ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ
ಉರುಳಾಗದಿರಲಿ ದಯೆ ಔದಾರ್ಯವು ||೩||
ಭ್ರಮೆಯ ಸೇವೆಯ ನೆಪದಿ ಪರಮತದ ಆಕ್ರಮಣ
ತಮಕೆ ತುತ್ತಾಗುತಿದೆ ನಮ್ಮ ಗೋವು
ಅಮರನಾಥದಿ ಮೆರೆದ ಏಕತೆಯೆ ಪ್ರೇರಣೆಯು
ಸಮರವಾದರು ಸರಿಯೆ ಸಿದ್ಧನಾವು ||೪||
***