Showing posts with label ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ sirivatsankita. Show all posts
Showing posts with label ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ sirivatsankita. Show all posts

Thursday, 5 August 2021

ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ದೇವ, ಗುರುಸ್ತುತಿ

ಅವತಾರತ್ರಯ


ಪ್ರಾಣಪತಿ ಕಾಯೊ ನೀ ಜಾಣ ಜಗತ್ರಾಣಾ

ಕಾಣದೆ ನಿನ್ನ ಮಹಿಮೆ ಧ್ಯಾನಿಸದೆ ಮರುಳಾದೆ ಪ


ಸೂತ್ರ ನಾಮಕ ನೀನು ಛತ್ರಪುರದೊಳು ನೆಲೆಶಿ

ಶತ್ರು ಪುಂಜವ ನಿಮಿಷ ಮಾತ್ರದಲಿ ತುಳಿದಿ

ಗಾತ್ರದಲಿ ನೀ ಲಾಲಿಸು ಪಾತ್ರನೆಂದೆನಿಸೆನ್ನ

ಕೃತ್ರಿಮದ್ವಿಜ ಸ್ತೋತ್ರ ಪಾತ್ರ ಕೃಷ್ಣನ ದಾಸ 1


ಕಾಮನೃಷನು ಹಿಂದೆ ರಾಮನಾಜ್ಞವ ತರಿಸಿ

ಆ ಮಹಾಸುರರೇ ಮಧಾಮವನು ಸಾರೆ

ಈ ಮಹಿಯೊಳಗೆ ನಿಸ್ಸೀಮನೊಬ್ಬನೆ ಯೆಂದು

ಭೂಮಿಯಲಿ ನಿನ್ನ ಗುಣ ಸ್ತೋಮವನು ತೋರಿಸಿದೆ 2


ಅವತಾರ ತ್ರಯಗಳಲಿ ಸ್ವವಶವ್ಯಾಪಿ ಲಕ್ಷ್ಮೀ -

ಧವನ ಮನವರಿತು ನೀ ಅವತರಿಸಿದೆ

ಯುವತಿ ವೇಷದಿ ಗೌರೀಧವನ ಮೋಹಸಿದಂಥ

ಶ್ರೀವತ್ಸಾಂಕಿತನಾದ ಅವನಿಗೊಡೆಯನ ದಾಸ 3

***