ಪುರಂದರದಾಸರು
ರಾಗ ಧನಶ್ರೀ ಆದಿತಾಳ
ಕರ್ಮಬಂಧನ ಛೇದನಾ, ರಘು
ರಾಮನ ನಾಮ ನೀ ನೆನೆ ಮನವೆ || ಪ||
ಮಂತ್ರವನರಿಯೆನು ತಂತ್ರವನರಿಯೆನು ಜಗ-
ದಂತ್ರವನರಿಯೆಂದೆನಬೇಡ
ತಂತ್ರಸ್ವತಂತ್ರನ ಪರಮಪವಿತ್ರನ
ಅಂತರಂಗದಿ ನೀ ನೆನೆ ಮನವೆ ||
ಜಪವನು ಅರಿಯೆನು ತಪವ ನಾನರಿಯೆನು
ಉಪದೇಶವನರಿಯೆನೆಂದೆನಬೇಡ
ಅಪಾರಮಹಿಮೆಯ ಉಡುಪಿಯ ಕೃಷ್ಣನ
ಉಪಾಯದಿಂದಲಿ ನೆನೆ ಮನವೆ ||
ಅರ್ಚಿಸಲರಿಯೆನು ಪೂಜಿಸಲರಿಯೆನು
ಮೆಚ್ಚಿಸಲರಿಯೆನೆಂದೆನಬೇಡ
ಅಚ್ಯುತಾನಂತ ಮುಕುಂದನ ನಾಮವ
ಸ್ವಚ್ಛದಿಂದಲಿ ನೆನೆ ಮನವೆ ||
ಧ್ಯಾನವನರಿಯೆನು ಮೌನವನರಿಯೆನು
ಜ್ಞಾನವನರಿಯೆನೆಂದೆನಬೇಡ
ಜಾನಕಿವಲ್ಲಭ ರಘುನಾಥನ ಸದಾ
ಧ್ಯಾನದಲಿಟ್ಟು ನೀ ನೆನೆ ಮನವೆ ||
ವದನದಿ ನಾರಾಯಣನೆಂಬೊ ನಾಮವು
ಮುದದಿ ಮಾತನು ಬಿಡಬೇಡ
ಪದುಮನಾಭ ಶ್ರೀ ಪುರಂದರವಿಠಲನ
ಸದಾಕಾಲದಿ ನೀ ನೆನೆ ಮನವೆ ||
***
ರಾಗ ಧನಶ್ರೀ ಆದಿತಾಳ
ಕರ್ಮಬಂಧನ ಛೇದನಾ, ರಘು
ರಾಮನ ನಾಮ ನೀ ನೆನೆ ಮನವೆ || ಪ||
ಮಂತ್ರವನರಿಯೆನು ತಂತ್ರವನರಿಯೆನು ಜಗ-
ದಂತ್ರವನರಿಯೆಂದೆನಬೇಡ
ತಂತ್ರಸ್ವತಂತ್ರನ ಪರಮಪವಿತ್ರನ
ಅಂತರಂಗದಿ ನೀ ನೆನೆ ಮನವೆ ||
ಜಪವನು ಅರಿಯೆನು ತಪವ ನಾನರಿಯೆನು
ಉಪದೇಶವನರಿಯೆನೆಂದೆನಬೇಡ
ಅಪಾರಮಹಿಮೆಯ ಉಡುಪಿಯ ಕೃಷ್ಣನ
ಉಪಾಯದಿಂದಲಿ ನೆನೆ ಮನವೆ ||
ಅರ್ಚಿಸಲರಿಯೆನು ಪೂಜಿಸಲರಿಯೆನು
ಮೆಚ್ಚಿಸಲರಿಯೆನೆಂದೆನಬೇಡ
ಅಚ್ಯುತಾನಂತ ಮುಕುಂದನ ನಾಮವ
ಸ್ವಚ್ಛದಿಂದಲಿ ನೆನೆ ಮನವೆ ||
ಧ್ಯಾನವನರಿಯೆನು ಮೌನವನರಿಯೆನು
ಜ್ಞಾನವನರಿಯೆನೆಂದೆನಬೇಡ
ಜಾನಕಿವಲ್ಲಭ ರಘುನಾಥನ ಸದಾ
ಧ್ಯಾನದಲಿಟ್ಟು ನೀ ನೆನೆ ಮನವೆ ||
ವದನದಿ ನಾರಾಯಣನೆಂಬೊ ನಾಮವು
ಮುದದಿ ಮಾತನು ಬಿಡಬೇಡ
ಪದುಮನಾಭ ಶ್ರೀ ಪುರಂದರವಿಠಲನ
ಸದಾಕಾಲದಿ ನೀ ನೆನೆ ಮನವೆ ||
***
Karmabandhana chedana, raghu
Ramana nama ni nene manave || pa||
Mantravanariyenu tantravanariyenu jaga-
Dantravanariyemdenabeda
Tantrasvatantrana paramapavitrana
Antarangadi ni nene manave ||
Japavanu ariyenu tapava nanariyenu
Upadesavanariyenemdenabeda
Aparamahimeya udupiya krushnana
Upayadindali nene manave ||
Arcisalariyenu pujisalariyenu
Meccisalariyenemdenabeda
Acyutananta mukundana namava
Svacchadindali nene manave ||
Dhyanavanariyenu maunavanariyenu
J~janavanariyenemdenabeda
Janakivallaba ragunathana sada
Dhyanadalittu ni nene manave ||
Vadanadi narayananembo namavu
Mudadi matanu bidabeda
Padumanaba sri purandaravithalana
Sadakaladi ni nene manave ||
***
ಕರ್ಮಬಂಧನ ಛೇದನ - ಶ್ರೀ - |
ರಾಮನ ನಾಮವ ನೆನೆ ಮನವೆ ಪ.
ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1
ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2
ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3
ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4
ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5
ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6
ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
********