Showing posts with label ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ purandara vittala APPAPPA NEE NODAPPA MAIYELLAVU KESARAPPA. Show all posts
Showing posts with label ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ purandara vittala APPAPPA NEE NODAPPA MAIYELLAVU KESARAPPA. Show all posts

Saturday, 4 December 2021

ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ purandara vittala APPAPPA NEE NODAPPA MAIYELLAVU KESARAPPA



Audio by Sri. Madhava Rao


ಅಪ್ಪಪ್ಪಾ ನೀ ನೋಡಪ್ಪ ಮೈಯಲ್ಲವು ಕೆಸರಪ್ಪ
ಕಪ್ಪು ಬಡಿವುದೇನಪ್ಪ ತೊಳೆವೆನೊ ನೀ ಬಾರಪ್ಪ೧


ಬಾರಪ್ಪ ನೀ ಬಾರಪ್ಪ ಭಾರ ಹೊರುವುದೇನಪ್ಪ
ಭಾರವೆಲ್ಲ ನಿನದಪ್ಪಾ ಸುರರ ಕಾವ ಎನ್ನಪ್ಪ೨

ಎನ್ನಪ್ಪ ಎನ್ನಪ್ಪ ಮೋರೆ ಸೊಟ್ಟು ಯಾಕಪ್ಪ
ಕಾನನಗಡ್ಡೆ ಬೇಡಪ್ಪ ಒಪ್ಪರ ಬೇರ ತಿನ್ನಪ್ಪ೩

ತಿನ್ನಪ್ಪ ತಿನ್ನಪ್ಪ ಭಕ್ತಿ ರಸದ ಹಣ್ಣಪ್ಪ
ಸಣ್ಣವ ನೀಡುವನಪ್ಪ ತೆರೆದ ಬಾಯ ತೋರಪ್ಪ೪

ತೋರಪ್ಪ ನೀ ತೋರಪ್ಪ ಮುದ್ದು ರೂಪವ ತೋರಪ್ಪ
ಇಂದ್ರ ಪದವ ನೀಡಪ್ಪ ಬಲಿಗೆ ಕಾವಲಾಗಪ್ಪ೫

ಆಗಪ್ಪ ಭೃಗು ರಾಮಪ್ಪ ವನಚರನು ಆಗಪ್ಪ
ಭಾಗವತ ಭಟನಪ್ಪ ಪಾದುಕೆ ಅವಗೆ ನೀಡಪ್ಪ೬

ನೀಡಪ್ಪ ನೀಡಪ್ಪ ಹೆಣ್ಣ ಅವಗೆ ನೀಡಪ್ಪ
ಬಡವನಾದರೇನಪ್ಪ ಸೋದರ ಅಳಿಯನು ಬಿಡನಪ್ಪ೭

ಬಿಡೆನಪ್ಪ ಬಿಡೆನಪ್ಪ ನಿನ್ನ ಚರಣವ ಬಿಡೇನಪ್ಪ
ಕಡಿವಾಣವ ಪಿಡಿಯಪ್ಪ ಪಾರ್ಥಗೆ ಸಾರಥ್ಯ ಮಾಡಪ್ಪ೮

ಮಾಡಪ್ಪ ನೀ ಮಾಡಪ್ಪ ಮೋಹ ಶಾಸ್ತ್ರವ ಕಲಿಸಪ್ಪ
ದಿಟ್ಟ ತೇಜಿಯನೇರಪ್ಪ ತಂದೆ ಪುರಂದರ ವಿಠಲಪ್ಪ೯


***

appappA nI. rAgA: Anandabhairavi. Adi tALA.


1: appappA nI nODppa maiyallavu kEsarappa kappu baDivudEnappa toLeveno nI bArappa

caraNam 2

bArappa nI bArappa bhAra horuvudEnappa bhAravella ninadappA surara kAva ennappa

caraNam 3

ennappa ennappa mOre soTTu yAkappa kAnanagaDDe bEDappa oppara bEra tinnappa

caraNam 4

tinnappa tinnappa bhakti rasada haNNappa saNNava nIDuvanappa tereda bAya tOrappa

caraNam 5

tOrappa nI tOrappa muddu rUpava tOrappa indra padava nIDappa balige kAvalAgappa

caraNam 6

Agappa bhrugu rAmappa vanacaranu Agappa bhAgavata bhatanappa pAduke avage nIDappa

caraNam 7

nIDappa nIDappa heNNa avage nIDappa baDavanADarEnappa sOdara aLiyanu biDanappa

caraNam 8

biDEnappa biDenappa ninna caraNava biDEnappa kaDivANava piDiyappa pArthage sArathya mADappa

caraNam 9

mADappa nI mADappa mOha shAstrava kalisappa diTTa tEjiyanErappa tande purandara viTTalappa
***


ರಾಗ ಭೈರವಿ ಆದಿ ತಾಳ

ಅಪ್ಪಪ್ಪಾ ನೀ ನೋಡಪ್ಪ
ಮೈಯೆಲ್ಲವು ಕೇಸರಪ್ಪ
ಕಪ್ಪು ಬಡಿವುದೇನಪ್ಪ
ತೊಳೆವೆನೊ ನೀ ಬಾರಪ್ಪ ||ಪ||

ಬಾರಪ್ಪ ನೀ ಬಾರಪ್ಪ
ಭಾರ ಹೊರುವುದೇನಪ್ಪ
ಭಾರವೆಲ್ಲ ನಿನದಪ್ಪಾ
ಸುರರ ಕಾವ ಎನ್ನಪ್ಪ

ಎನ್ನಪ್ಪ ಎನ್ನಪ್ಪ
ಮೋರೆ ಸೊಟ್ಟು ಯಾಕಪ್ಪ
ಕಾನನಗಡ್ಡೆ ಬೇಡಪ್ಪ
ಒಪ್ಪರ ಬೇರ ತಿನ್ನಪ್ಪ

ತಿನ್ನಪ್ಪ ತಿನ್ನಪ್ಪ
ಭಕ್ತಿ ರಸದ ಹಣ್ಣಪ್ಪ
ಸಣ್ಣವ ನೀಡುವನಪ್ಪ
ತೆರೆದ ಬಾಯ ತೋರಪ್ಪ

ತೋರಪ್ಪ ನೀ ತೋರಪ್ಪ
ಮುದ್ದು ರೂಪವ ತೋರಪ್ಪ
ಇಂದ್ರ ಪದವ ನೀಡಪ್ಪ
ಬಲಿಗೆ ಕಾವಲಾಗಪ್ಪ

ಆಗಪ್ಪ ಭೃಗು ರಾಮಪ್ಪ
ವನಚರನು ಆಗಪ್ಪ
ಭಾಗವತ ಭರತನಪ್ಪ
ಪಾದುಕೆ ಅವಗೆ ನೀಡಪ್ಪ

ನೀಡಪ್ಪ ನೀ ನೀಡಪ್ಪ
ಹೆಣ್ಣ ಅವಗೆ ನೀಡಪ್ಪ
ಬಡವನಾದರೇನಪ್ಪ
ಸೋದರ ಅಳಿಯನು ಬಿಡನಪ್ಪ

ಬಿಡನಪ್ಪ ಬಿಡನಪ್ಪ
ನಿನ್ನ ಚರಣವ ಬಿಡನಪ್ಪ
ಕಡಿವಾಣವ ಪಿಡಿಯಪ್ಪ
ಪಾರ್ಥಗೆ ಸಾರಥ್ಯ ಮಾಡಪ್ಪ

ಮಾಡಪ್ಪ ನೀ ಮಾಡಪ್ಪ
ಮೋಹ ಶಾಸ್ತ್ರವ ಕಲಿಸಪ್ಪ
ದಿಟ್ಟ ತೇಜಿಯನೇರಪ್ಪ
ತಂದೆ ಪುರಂದರ ವಿಟ್ಟಲಪ್ಪ
*********