..
kruti by ವೀರನಾರಾಯಣ Veeranarayana
ಜಯಮಂಗಳಂ ನಿತ್ಯ ಶುಭಮಂಗಳಂ ಪ
ಅಂಜನೆಯ ಕುವರಂಗೆ ಭಿಂಜನನ ಪುತ್ರಂಗೆಪಂಜುಗದಿರನ ನುಂಗೆ ಅಂಜದಲೆ ಜಿಗಿದಂಗೆಕಂಜಾಕ್ಷ ಶ್ರೀರಾಮ ದೂತಂಗೆ ಹನುಮಂಗೆಸಂಜೀವಿನಿಗೆ ಮುಖ್ಯ ಪ್ರಾಣ ದೇವಂಗೆ 1
ಕಾನನದಿ ರಾಮನಿಗೆ ತಾನಾದ ಭೃತ್ಯಂಗೆದಾನವನ ಲಂಕೆಯನು ಸೂರೆಗೊಂಡವಗೆಜಾನಕಿಯ ಸುದ್ದಿಯನು ತಂದುರುಹಿದಾತಂಗೆವಾನರ ಪ್ರಮುಖನಿಗೆ ಧೀರ ಮಾರುತಿಗೆ 2
ದುಷ್ಟರನು ಶಿಕ್ಷಿಸುತ ಕಷ್ಟಗಳ ಪರಿಹರಿಸಿತುಷ್ಟಿಕೊಡುವಾತನಿಗೆಸೃಷ್ಟಿಯಲಿ ಸಕಲ ಜನ ಪೂಜ್ಯನಿಗೆ ಮಹಿಮನಿಗೆಶ್ರೇಷ್ಠ ಗದುಗಿನ ವೀರನಾರಾಯಣನ ಪ್ರೀಯಂಗೆ 3
***