Showing posts with label ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗಯ್ಯಾ helavana katte MAKKALA MAANIKYAVE MOHANNA BAA RANGAYYA. Show all posts
Showing posts with label ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗಯ್ಯಾ helavana katte MAKKALA MAANIKYAVE MOHANNA BAA RANGAYYA. Show all posts

Saturday, 11 December 2021

ಮಕ್ಕಳ ಮಾಣಿಕವೆ ಮೋಹನ್ನ ಬಾ ರಂಗಯ್ಯಾ ankita helavana katte MAKKALA MAANIKYAVE MOHANNA BAA RANGAYYA



ಮಕ್ಕಳ ಮಾಣಿಕವೆ ಮೋಹನ್ನ

ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ

ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ.


ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು

ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ

ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ

ತುಪ್ಪಾಕಜ್ಜಾಯ ಕೊಡುವೆನೂ 1


ಅಂದಿಗೆ ಕಿರುಗೆÉಜ್ಜೆ ಅಲಗೊತ್ತು ಕೈಯೊಳಗಿದ್ದು

ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ

ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ

ಅಂದವಾದ ಒಂದು ಮುದ್ದು ತಾರಯ್ಯ 2


ಓಡಿಓಡಿ ಬಾರೋ ವಸುದೇವನಂದನಾ ಕಂದ

ನೋಡಿ ನೋಡಿ ನಗುತ ಬಾರೊ ರಂಗಯ್ಯ

ಕಾಡ ಬೇಡ ಎನ್ನಯ್ಯಾ ಹೆಳವನಕಟ್ಟೆ

ಕೋಡಗಲ್ಲವಾಸ ವೆಂಕಟ 3

****