Showing posts with label ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ devapura lakshmikanta. Show all posts
Showing posts with label ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ devapura lakshmikanta. Show all posts

Monday, 2 August 2021

ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ankita devapura lakshmikanta

ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ

ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ


ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ

ಲಾಮವೆಸೆವ ವರ ಫಣಿಯಾ

ಭ್ರೂಮಧ್ಯದೊಳೆಳೆವರೆಯಂತೊಪ್ಪುವ

ನಾಮದ ಪಿರಿನೊಸಲಾ1

ತಾಮರಸಾಯತನೇತ್ರದಾನತಸು

ಕ್ಷೇಮಾಂಕುರದ ನೋಟದ

ಚಾಮೀಕರ ಕುಟ್ಮಲ ನಾಸಿಕದಭಿ

ರಾಮ ಸುಮೌಕ್ತಿಕದಾ2

ಮಾ ಮನೋಹರ ಚುಬುಕಾಗ್ರದ ನವಪಲ್ಲ

ವಾ ಮಿಳಿತಾಧರದ

ಸೋಮವದನದೆಳನಗೆಯೂ ಪೊಳೆವಟ್ಟ

ಕೌಮುದಿಯಾ ಸೊಗಸಿನಾ 3

ರಾಮಣೀಯಕವದನ ಮಕರಕುಂಡಲದ ಸು

ರಾಮಯದ ಕದಪಿನ

ಕಾಮನೀಯ ಕಂಬುಕಂಠದ ಸಿರಿತುಳ

ಸೀ ಮಂದಾರಮಾಲೆಯ 4

ಜೀಮೂತ ಸವಿಯನೆ ರಂಜಿಪ ಸು

ಶ್ಯಾಮಲ ರುಚಿರಾಂಗದ

ಕೌಮೋದಕಿ ಖಡ್ಗ ಕಮಲ ಕಂಬು ನಿ

ಸ್ಸೀಮ ಚಕ್ರಾಯುಧಂಗಳಾ 5

ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ

ವ್ಯಾಮೋದ ಗಂಧ ಲೇಪದ

ಸೌಮಾನಜಂ ತಾಳ್ದುಪವೀತದ ಮಣಿ

ಸ್ತೋಮಾಭರಣಂಗಳಾ 6

ಸಾಮಾಜಿಕರ ಸನ್ನಿಭ ರಂಜನದು

ದ್ದಾಮ ಸುಬಾಹುಗಳಾ

ನೇಮಿತಾಂಗದ ತೋಳಬಂದಿ ಕಂಕಣಮುಂ

ಗೈಮುರಾರಿ ಮುದ್ರೆಯಾ 7

ಐಮೊಗದಹಿಯ ತೆರದ ಕರಕಮಲದ

ಸೈಮಿರುಪಂಗುಲಿಗಳಾ

ರೋಮಾವಳಿಯ ಪೊಳೆವ ಪೊಡೆವಲರ ಪಿ

ತಾಮಹಮುದಿತ ನಾಭಿಯಾ 8

ಹೇಮಾಂಬರದಸಿಮಧ್ಯದ ಕಾಂಚೀ

ಧಾಮದ ಕಟಿತಟದ

ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ

ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9

ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ

ಶೋ ಮಹಿಮೆಯ ಚೆಲ್ವಿನಾ

ಪ್ರೇಮದೊಳಾನತರಂ ಸಲಹುವ ಸುರಪುರ ಮ -

ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10

****