Showing posts with label ಎಲೆ ದೇವಿ ಇಂತು ಚಿಂತೆಯು ಯಾಕ ಸುಲಭದಿ ತಂದು ತೋರುವೆ gurumahipati. Show all posts
Showing posts with label ಎಲೆ ದೇವಿ ಇಂತು ಚಿಂತೆಯು ಯಾಕ ಸುಲಭದಿ ತಂದು ತೋರುವೆ gurumahipati. Show all posts

Wednesday, 1 September 2021

ಎಲೆ ದೇವಿ ಇಂತು ಚಿಂತೆಯು ಯಾಕ ಸುಲಭದಿ ತಂದು ತೋರುವೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಲೆ ದೇವಿ ಇಂತು ಚಿಂತೆಯು ಯಾಕ| ಸುಲಭದಿ ತಂದು ತೋರುವೆ ನಿನ್ನರಸನಾ ಪ 


ನಳಿನಗಳಲಿ ಅಪರಾಧವಾಯಿತೆಂದು| ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು| ಕಲಸಾರುವೇನೇ ನಿನ್ನಯ ತನುಗುಪವ| ತೊಲಗಿಬಿಟ್ಟು ನಿಲ್ಲುವನೇನೇ ರಂಗಾ1 

ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು| ತ್ಯಜಿಸಿ ಬಂದ ತಪ್ಪಾಯಿತೆಂದು| ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ| ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ2 

ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ| ಇನ್ನು ನಾ ಪೋಗಿ ನಾನಾ ಪರಿಯಿಂದಾ| ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ| ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ 3

***