Showing posts with label ಸುಳಿನಾಭಿ ಸುಮನೋಹರವಾದ vijaya vittala ankita suladi ಉಡುಪಿ ಕೃಷ್ಣ ಸುಳಾದಿ SULINAABHI SUMANOHARAVAADA UDUPI KRISHNA SULADI. Show all posts
Showing posts with label ಸುಳಿನಾಭಿ ಸುಮನೋಹರವಾದ vijaya vittala ankita suladi ಉಡುಪಿ ಕೃಷ್ಣ ಸುಳಾದಿ SULINAABHI SUMANOHARAVAADA UDUPI KRISHNA SULADI. Show all posts

Sunday, 8 December 2019

ಸುಳಿನಾಭಿ ಸುಮನೋಹರವಾದ vijaya vittala ankita suladi ಉಡುಪಿ ಕೃಷ್ಣ ಸುಳಾದಿ SULINAABHI SUMANOHARAVAADA UDUPI KRISHNA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಉಡುಪಿ ಕೃಷ್ಣ ಸುಳಾದಿ 

 ರಾಗ ಬೃಂದಾವನ ಸಾರಂಗ 

 ಧ್ರುವತಾಳ 

ಸುಳಿನಾಭಿ ಸುಮನೋಹರವಾದ ಉದರ ತ್ರಿ -
ವಳಿಯಲ್ಲಿ ತ್ರಿಲೋಕಾಶ್ರಯ ಮಾಡಿಕೊಂಡಿರೆ 
ಎಳೆ ತುಳಸಿ ಕೌಸ್ತುಭಮಣಿ ಶಿರಿ ವತ್ಸ ಪರಿ -
ಮಳ ದ್ರವ್ಯ ಸೂಸುತಿರೆ ಸರ್ವಾಂಗದಲ್ಲಿ ನಿತ್ಯ 
ಬೆಳಗುವ ಎಳೆನಗೆ ಕುಂದ ಕುಸುಮದಂತೆ 
ನಳನಳಿಸುವ ನಳಿತೋಳು ಉನ್ನತ ಬಾಹು -
ಗಳ ಕರ್ಪೂರಾದ ಕರಡಿಗೆ ಯಂದಾದಿ ವನಾ 
ಗಿಳಿ ವಿಂಡು ಸೋಲುವಧರ ಕಪೋಲ ಕರ್ನ
ವೊಲಿವೊ ಕುಂಡಲ ಮುಂಬಣೆಯಲ್ಲಿ ತೂಗುವ 
ಅಳಿಯಗೂದಲು ವಿಸ್ತಾರ ನೊಸಲು ತಿಲಕ 
ಚಲುವ ಕಂಕಣ ಕಡಗ ಬೆರಳಾ ನಾನಾ ಉಂಗುರ 
ಪೊಳೆವ ನವರತ್ನ ವೈಜಯಂತಿ ಮಾಲೆ ಸೊಬಗು 
ದಳವಾದ ಪಾದ ಕನಕಸೂತ್ರಾ ನವ ಉ -
ತ್ಪಲದಳ ಲೋಚನಾ ಮಂಡಲಾ ಮಂಡಿತದೇವ 
ಝಳಝಳಿಸುವ ಜಗನ್ಮೋಹಪಾ ವಿಚಿತ್ರಕಾಂತಿ 
ಬಲು ಸೂರ್ಯರ ಬೆಳಗವಂದೆಸವಾಸವೆನೆ 
ಅಲವಬೋಧ ಮುನಿಯಿಂದ ಪೂಜಿಯಗೊಂಡ 
ಸುಲಭ ದೇವರ ದೇವ ವಿಜಯವಿಟ್ಠಲ ಕೃಷ್ಣ 
ಜಲಧರ ವರ್ನ ಸುಗುಣ ಉಡುಪಿ ನಿವಾಸ ॥ 1 ॥

 ಮಟ್ಟತಾಳ 

ತಿಳಲಾಗಾವಿಯ ಪೊಂಬಟ್ಟಿವಸನ 
ಘಿಳಿ ಘಿಳೆಲುನಾದ ಕಿಂಕಿಣಿ ಕಟಿಸೂತ್ರ 
ಮಲವಾರ ಗಂಡಾನೆಂಬೊ ಬಿರಿದೂ ಬಾವುಲಿ ಕಡಿ 
ಇಳಿಯೊಳಗೆ ಮೆರೆವ ವಿಶ್ವತೋಮಯ ಮಹಿಮಾ 
ನೆಲನ ಪಾವನವಾದ ಚರಣ ಭೂಷಣ ವಪ್ಪೆ 
ಪ್ರಳಯಾರಹಿತ ನಮ್ಮ ವಿಜಯವಿಟ್ಠಲ ಉಡುಪಿ -
ನಿಲಯಾ ಯಾದವ ಕೃಷ್ಣ ಮಧ್ವಮುನಿವರದ ॥ 2 ॥

 ತ್ರಿವಿಡಿತಾಳ 

ಮೊಲ್ಲೆ ಮಲ್ಲಿಗೆ ಜಾಜಿ ಮರಗು ಮಂದಾರ 
ಎಲ್ಲ ಪೂಗಳು ತುರುಬಿಲಿ ತುರುಬಿದ ಜಾಣ 
ಸೊಲ್ಲು ಕೊಳಲಾ ಧ್ವನಿಗೆ ಗೋಪಾಂಗನೆಯರ ಮನ 
ಬಿಲ್ಲು ಬಾಗಿಸಿದಂತೆ ನಿನ್ನ ತತ್ತರಿಸಿದೆ 
ವಲ್ಲಡಿಯೊಳು ತುರುಗಳ ಕೂಡ ನಲಿದನೆ 
ಇಲ್ಲಿಗೆ ಬಂದಾ ಬಗೆ ಪೇಳು ಪರಮಾತ್ಮ 
ಎಲ್ಲೆ ಗೋಕುಲ ವೃಂದಾವನ ಎಲ್ಲೆ ದ್ವಾರಕ -
ದಲ್ಲಿ ಮೆರೆದು ವೈಭೋಗದಿಂದೊಪ್ಪದೆ 
ಕಲ್ಲಿವಾಗರಾ ಮೆದ್ದ ವಿಜಯವಿಟ್ಠಲ ಸರ್ವಾ -
ರಲ್ಲಿ ಇಪ್ಪಾ ಉಡುಪಿಕೃಷ್ಣ ಮಧ್ವ ಮುನೇಶ ॥ 3 ॥

 ಅಟ್ಟತಾಳ 

ನಿನ್ನ ಪಾದವೆ ಎನ್ನಾ ಶಿರಕೆ ಜೀವನ್ನಾ 
ನಿನ್ನ ನೊಡವದೆನ್ನ ಕಣ್ಣಿಗೆ ಜೀವನ್ನ 
ನಿನ್ನ ಶ್ರವಣ ಎನ್ನ ಕರ್ನಕ್ಕೆ ಜೀವನ್ನ 
ನಿನ್ನ ಪಾಡುವದೆನ್ನ ಜಿಂಹಕ್ಕೆ ಜೀವನ್ನ 
ನಿನ್ನ ಎಂಜಲು ಎನ್ನ ವದನಕ್ಕೆ ಜೀವನ್ನ 
ನಿನ್ನ ಸೇವೆ ಎನ್ನ ಹಸ್ತಕ್ಕೆ ಜೀವನ್ನ 
ನಿನ್ನ ಯಾತ್ರೆಗಳೆನ್ನ ಚರಣಕ್ಕೆ ಜೀವನ್ನ 
ನಿನ್ನ ಧ್ಯಾನವೆ ಎನ್ನ ಮನಸಿಗೆ ಜೀವನ್ನ 
ನಿನ್ನ ಪಾದೋದಕ ಪೀಯೂಷ ಪ್ರ -
ಪನ್ನ ಜೀವನವಯ್ಯಾ ಜೀವೇಶ 
ನಿನ್ನವರ ದಾಸ ಒಮ್ಮೆನೆನಿಸಿದ್ದು 
ಎನ್ನ ಸಾಸಿರ ಕುಲಕೋಟಿಗೆ ಜೀವನ್ನ 
ಉನ್ನತ ಗುಣನಿಧಿ ವಿಜಯವಿಟ್ಠಲರೇಯಾ 
ಮನ್ನುಜ ವಿಗ್ರಹ ಉಡುಪಿನ ಕೃಷ್ಣ 
ಬಣ್ಣಿಪ ಗುರು ಮಧ್ವಮುನಿಗೆ ವಲಿದು ಬಂದ ॥ 4 ॥

 ಆದಿತಾಳ 

ಶರಧಿ ಆಪೋಷಣ ಮಾಡಿದನೊಬ್ಬಾ 
ತರಣಿ ಸಂಗಡ ಕಕ್ಷೆ ಮಾಡಿದನೊಬ್ಬಾ 
ಪುರವನು ಎಬ್ಬಿಸಿ ಉಳಹಿದನೊಬ್ಬಾ 
ಶರದಲ್ಲಿ ಹೊಳಿಯನು ಬಂಧಿಸಿದನೊಬ್ಬಾ 
ಮುರಿವ ಮಾರಿಗೆ ಹಣಿಯದಿದ್ದವನೊಬ್ಬಾ 
ಉರಗವ ಬಿಡಿಸಿ ಸಭೆಗೆ ತಂದವನೊಬ್ಬಾ 
ಸುರರಿಗೆ ಉಪಕಾರ ಮಾಡಿದವನೊಬ್ಬಾ 
ಉರಿವ ಗರಳವ ನುಂಗಿ ನಗುವಾನೊಬ್ಬಾ 
ಹರಿ ನಿನ್ನ ಭಕ್ತರ ಶಕ್ತಿಗೆ ನಮೊ ನಮೊ 
ಹರಿ ನಿನ್ನ ಶಕ್ತಿಗೆ ಅನಂತ ನಮೊ ನಮೊ 
ಪರಮ ಗುರು ಮಧ್ವಮುನಿಗೊಲಿದ ಕೃಷ್ಣ 
ಸುರವರ ಪರಲೀಲಾ ವಿಜಯವಿಟ್ಠಲರೇಯಾ 
ಧರಣಿಗಧಿಕ ಉಡುಪಿನ ವಾಸಾ ದಯಾಬುಧಿ ॥ 5 ॥

 ಜತೆ 

ಅಡಿ ತೊಲಗದಲಿರು ಹೃದಯ ಸದನ ಮಧ್ಯ 
ಕಡಗೋಲು ಪಿಡಿದ ವಿಜಯವಿಟ್ಠಲ ಕೃಷ್ಣ ॥
*********