Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ವಾನರೇಂದ್ರನ ರೂಪವ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ವಾನರೇಂದ್ರನ ರೂಪವ purandara vittala. Show all posts

Friday, 6 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ವಾನರೇಂದ್ರನ ರೂಪವ purandara vittala

ರಾಗ ಮುಖಾರಿ ಅಟತಾಳ 

ಜಯಮಂಗಳಂ ನಿತ್ಯ ಶುಭಮಂಗಳಂ ||ಪ||

ವಾನರೇಂದ್ರನ ರೂಪವ ತಾಳಿದ
ವನಧಿಯ ದಾಟಿ ಜಾನಕಿಗುಂಗುರವಿತ್ತ
ದಾನವೇಂದ್ರನ ವನವನೆಲ್ಲವ ಕಿತ್ತು ಪಟ್ಟಣವನೆ ಸುಟ್ಟು
ಇನಕುಲದ ರಾಮಗೆರಗಿದ್ಹನುಮಂತಗೆ ||

ದುಷ್ಟದುರ್ಯೋಧನನ ಮಡುಹಿ
ಜ್ಯೇಷ್ಠಗೆ ಪಟ್ಟಗಟ್ಟಿ ಅವನಿಯೊಳು ಮೆರೆದವನಿಗೆ
ದುಷ್ಟರಾಯರನೆಲ್ಲ ಮಡುಹಿದಖಿಳೇಶ್ವರನ
ಕೃಷ್ಣಗತಿಪ್ರಿಯನಾದ ಭೀಮಸೇನಗೆ ||

ಯತಿರೂಪವ ತಾಳಿ ಶ್ರುತಿಶಾಸ್ತ್ರದಿಂ ಶ್ರೀ-
ಪತಿಯು ಸರ್ವೋತ್ತಮನೆಂದೆನಿಸಿದವಗೆ
ಯತಿವೇದವ್ಯಾಸನಾದ ಪುರಂದರವಿಠಲನ್ನ
ಗತಿ ಮಾರ್ಗವ ತೋರಿದ ಮಧ್ವಮುನಿಗೆ ||
*******