Showing posts with label ಆರಬಾಲಕನೆ ಜಾರನಿವನಾರ ಬಾಲಕನೆ ankita prasannavenkata. Show all posts
Showing posts with label ಆರಬಾಲಕನೆ ಜಾರನಿವನಾರ ಬಾಲಕನೆ ankita prasannavenkata. Show all posts

Thursday, 7 November 2019

ಆರಬಾಲಕನೆ ಜಾರನಿವನಾರ ಬಾಲಕನೆ ankita prasannavenkata

by ಪ್ರಸನ್ನವೆಂಕಟದಾಸರು
ಆರ ಬಾಲಕನೆ ಜಾರನಿವನಾರ ಬಾಲಕನೆ ಪ.

ಗುಂಡಿಗೆ ಬೆಣ್ಣೆ ಕದ್ದುಂಡಸಿಯರ 
ಕುಚಪುಂಡರೀಕವಿಡಿದು ಭಂಡು ಮಾಡುತಲಿಹ 1

ನಿದ್ದೆಯ ಕಾಲಕೆ ಸದ್ದಿಲ್ಲದೆ ಬಂದುಗದ್ದ
ಮುಂಡ್ಯಾಡಪ್ಪಿ ಮುದ್ದು ನೀಡುವ ನೋಡೆ2

ಅರ್ತಿಲಿ ಬಾಲನ್ನೆತ್ತಿಕೊಂಡರೇನಮ್ಮಅತ್ತೆ 
ಮಾವನ ಮುಂದೆ ಬತ್ತಲೆ ಮಾಡುವ 3

ಬಲು ಮೋಹ ಬರುತಿರೆ ಎಳೆಯನ ಕಾಣುತ
ಅಳುಕದೆಮ್ಮುಡಿಯೇರಿ ಕಳೆವಕಂಚುಕಇವ4

ಹುಸಿಯೇ ಅಳಲು ಅವಚಿ ರಂಬಿಸಿದ ಮೇಲೆ
ಪ್ರಸನ್ವೆಂಕಟ ಕೃಷ್ಣ ನಸುನಗು ನಗುತಾನೆ 5
*******