..
kruti by Srida Vittala Dasaru Karjagi Dasappa
ಕರುಣಿಸುವುದು ಎನ್ನಾ ಕರಿವರದ ಕೇಶವ
ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ
ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ
ಸರಸಿಜಾಪತಿ ಸರಸಿಜೋದ್ಭವ
ಹರಸುರಾಧಿಪ ವಂದ್ಯ ನಿನ್ನಯ
ಚರಣ ನಂಬಿದೆ ಎರವು ಮಾಡದೆ
ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ.
ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ
ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ
ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ
ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ
ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?)
ನಡಿಸು ವೆಂಕಟಾ
ಘನತೆ ನಿನಗಿದು ತಿಳಿದು ವೇಗದಿ
ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ 1
ಮೊರೆಯ ಲಾಲಿಸು ಜೀಯಾ ಅರೆ-
ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ-
ನ್ಯರನು ಕಾಣದೆಯರಗಿದೆನು ಸುರ ಸಹಾಯ
ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ
ಬಿಡು ನಿನ್ನ ಮಾಯಾ ಬಲ ತಡದು
ನಿಕ್ರವ ತರಲು ಜನರೊಳು (?)
ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ
ಕರಿಯು ಕರೆಯಲು ಬರುವುದುಂಟೇ
ಕರುಣಾಸಾಗರನೆಂಬೊ ನಿನ್ನಯ
ಬಿರುದು ಉಳ್ಳದಕೊಂಡು ಸಾಧನೆ
ಧರೆಯ ದುಷ್ಟರ ಬಾಧೆ ತಪ್ಪಿಸಿ
ಹರುಷವನು ಅತಿಗರೆದು ನಿರುತದಿ 2
ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ
ನಿಡಲಿ ಬೆನ್ನಲಿ ನÉೂೀಡಿ ಪಾದಗಳ ಎಳೆಯುತ
ನಡೆದು ಕೋಪವ ಮಾಡಿಬಿಡು ದೈನ್ಯದಲಿ
ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ
ಮಡುವಿನೊಳು ಗಿಡವೇರಿ ಧುಮುಕಲು
ಒಡನೆ ಅಂಬರ ಬಿಟ್ಟು ಖಡ್ಗವ
ಪಿಡಿದು ವಾಜಿಯನೇರಿದನು ಜರ
ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು
ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ 3
(ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)
***