ರಾಗ ಪೂರ್ವಿ ಆದಿ ತಾಳ
ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ ||
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ ||
ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ ||
ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ ||
ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ ||
***
ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ||ಪ ||
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ||ಅ ||
ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ ||
ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ ||
ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ ||
***
rAgA: pUrvi. Adi tALA. P;
pallavi
namba bEDi nAriyaranu hambala hAraisa bEDi
anupallavi
ambujAkSiyarolume Dambhakavendu tiLiyiro
caraNam 1
mTavella pusiyu satiyarATavella lncu sanne nOTavella ghanna ghAtakakUTavella vancane
pATu geTTu hengaLoDane kOTale goNDu tiruga bEDi nITugAtiyarolume bUTakavendu tiLiyiro
caraNam 2
sOtanandu viTage dainya matanADi maruLu goLisi kAtaravanu koTTu avana mAtA pitra tolagisi
prIti paDisi haNava seLedu rIti geDisi kaDeyalavana kOtiyante mADi biDuva jAtikAra hengaLa
caraNam 3
dharaNi janaru kELi lEsha karuNavilla nAriyarige eraLe kangaLa hengaLolume bareha nIramElina
sarasa mukhiyariva nIvu baride nambi keDalu bEDi guru purandara viTTala rAyana caraNava nambi badukiro
***