ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಸವಿಯೋ ಮಾತಿನ್ನೇನು ಸವಿಯೋ | ಶ್ರೀನಾಥನೆಚ್ಚರ ಪಡೆವಾ ಮಾನುಭಾವರ ಸ್ಥಿತಿ ಸಂಗತಿಯಾ ಪ
ನುಡಿಸವಿಯೋ ವೇದಾಂತದಾ | ನಡಿಸವಿಯೋ ಸಿದ್ಧಾಂತದಾ | ದೃಢ ಸವಿಯೋ ನೈರಾಶ್ಯದಾ | ಕುಡ ಸವಿಯೋ ಉಪದೇಶವಾ 1
ನೋಟ ಸವಿಯೋ ಸಮಭಾವದಾ | ಧಾಟಿ ಸವಿಯೋ ಭಕ್ತಿ ಸುಖದಾ | ಮಾಟ ಸವಿಯೋ ಹರಿ ಪ್ರೇಮದಾ | ಊಟ ಸವಿಯೋ ನಾಮಾಮೃತದಾ 2
ತ್ಯಾಗ ಸವಿಯೋ ವಿವೇಕದಾ | ಭೋಗ ಸವಿಯೋ ನಿರ್ವಿಷಯದಾ | ಶ್ರೀ ಗುರು ಮಹಿಪತಿ ಸ್ವಾಮಿ | ಯೋಗ ಭೋಗವೆರಡಲ್ಲಿರುವಾ 3
***