ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧು ಆದವ ಸಾಧುರ ಬಲ್ಲನೋ | ಸಾಧು ವೇಷದಿ ಮೆರೆವವ ಸಲ್ಲನೋ ಪ
ಧರಿಯೊಳು ಲೋಕದಿ ಸರೀ | ಹೊರವಳಿ ನಡತಿಯ ತೋರಿ | ಅವ | ತೋರಿ ತೋರದಲಿಹನೋ 1
ಯೋಗಿ | ಭೋಗಿಗೆ ಭೋಕ್ತನೂ ಆಗಿ | ಆವ | ಆಗಿ ಆಗದಲಿಹನೋ 2
ಗುರುವರ ಮಹಿಪತಿಸ್ವಾಮಿ ಅರಿತಾ ನಂದದ ಪ್ರೇಮಿ | ಅವ | ಪ್ರೇಮಿ ಪ್ರೇಮಿಗೆ ವಲಿವನೋ 3
***