Showing posts with label ಪಾದವನು ನಂಬಿದೆನೊ ಪರಮಪುರುಷಾ ಶ್ರಿನಿವಾಸರ ಮಹಾತ್ಮೆ venkatakrishna. Show all posts
Showing posts with label ಪಾದವನು ನಂಬಿದೆನೊ ಪರಮಪುರುಷಾ ಶ್ರಿನಿವಾಸರ ಮಹಾತ್ಮೆ venkatakrishna. Show all posts

Tuesday 1 June 2021

ಪಾದವನು ನಂಬಿದೆನೊ ಪರಮಪುರುಷಾ ಶ್ರಿನಿವಾಸರ ಮಹಾತ್ಮೆ ankita venkatakrishna

by yadugiriyamma

 ಪಾದವನು ನಂಬಿದೆನೊ ಪರಮಪುರುಷಾ

ಪಾವನನ ಮಾಡೆನ್ನ ಶ್ರೀರಂಗನಾಥ ಪ


ಚಿಲುವ ವಾಮನನಾಗಿ ಬಲಿಯ ಬೇಡಿದ ಪಾದ

ಧರಣಿಯೀರಡಿಯಿಂದಲಳದ ಪಾದ ಬಲಿಯ

ಪಾತಾಳದೊಳಗಿಟ್ಟು ಕಾಯ್ದ ಪಾದ

ಸುಲಭದಲಿ ಇಂದ್ರನಿಗೆ ಪದವಿಯನಿತ್ತ ಪಾದ 1

ಅಂಡವನು ಭೇದಿಸಿ ಗಂಗೆ ಪಡೆದ ಪಾದ

ಬ್ರಹ್ಮದೇವರು ತೊಳೆದು ಪೂಜಿಸಿದ ಪಾದ

ಇಂದ್ರಾದಿಸುರರೆಲ್ಲ ವಂದಿಸಿದ ಪಾದ

ಇಂದಿರಾ ಹೃದಯಾಕ್ಕಾನಂದ ತೋರಿದ ಪಾದ 2

ದುರುಳತನವನು ಮಾಡೆ ಯಶೋದೆ ಕಟ್ಟಿದ ಪಾದ

ಅಸುರ ಶಕಟನ ತುಳಿದ ದಿವ್ಯ ಪಾದ

ಒರಳನೆಳೆದು ಮತ್ತಿಮರನ ಒಡೆದ ಶ್ರೀಪಾದ

ಯಮಳರಿಗೆ ಮುಕ್ತಿಯನು ಇತ್ತ ಪಾದ 3

ಕಾಳಿಮಡುವನು ಕಲಕಿ ಫಣಿಯ ತುಳಿದ ಪಾದ

ಅಂದುಗೆ ಗೆಜ್ಜೆಯಳವಟ್ಟ ಪಾದ

ನಾಗಕನ್ನಿಕೆಯರಿಗೆ ಮಾಂಗಲ್ಯವಿತ್ತ ಪಾದ

ನಾರದಾದಿವಂದ್ಯ ಶ್ರೀಹರಿ ನಿಮ್ಮ ಪಾದ 4

ದುರುಳ ಕಂಸಾಸುರನ ಎದೆಯ ತುಳಿದ ಪಾದ

ಮುಚುಕುಂದಗೆ ಮುಕ್ತಿಯನಿತ್ತ ಪಾದ

ಭರದಿ ಗೋಮಂತವನುಯೇರಿದ ಶ್ರೀಪಾದ

ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ5

ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ

ಭರದಿಂದ ಮಿಥಿಲೆಗೆ ನಡೆದ ಪಾದ

ಹರನ ಧನುವನು ಮುರಿದು ಜಾನಕಿಯ ತಂದ ಪಾದ

ಪರಮಪಾವನ ಸೀತಾಪತಿ ನಿಮ್ಮ ಪಾದ 6

ಮಾತೆ ನುಡಿಯನು ಕೇಳಿ ವನಕೆ ನಡೆದ ಪಾದ

ಭರತನಿಗೆ ಒಲಿದು ಪಾದುಕೆಯಿತ್ತ ಪಾದ

ಸೇತುಬಂಧನ ಮಾಡಿ ಸೀತೆಯನು ತಂದ ಪಾದ

ಭಕ್ತ ವಿಭೀಷಣಗೆ ಅಭಯವನಿತ್ತ ಪಾದ 7

ಸೀತಾಪ್ರತಿಜ್ಞೆಯನು ಮಾಡಿಸಿದ ಶ್ರೀಪಾದ

ನಂದಿಗ್ರಾಮದಲಿ ಭರತನನು ಕಾಯ್ದ ಪಾದ

ಅನುಜರೊಡೆಗೊಂಡು ಅಯೋಧ್ಯೆಗೈದಿದ ಪಾದ

ಸೀತೆ ಸಹಿತಲೆ ಪೀಠದಲಿವೊಪ್ಪಿದ ಪಾದ 8

ರಾಜಸೂಯಾಗದಲಿ ಪೂಜೆಗೊಂಡ ಪಾದ

ಶಿಶುಪಾಲಗೆ ಮುಕ್ತಿಯನಿತ್ತ ಪಾದ

ದಂತವಕ್ರಾದಿಗಳನು ಸೆಳೆದುಕೊಂಡ ಪಾದ

ಅಖಿಲವೇದಗಳೆಲ್ಲ ಅರಸಿ ಬಂದ ಪಾದ 9

ಕÀುರುಪಾಂಡವರಿಗೆ ಸಂಧಿಗೈತಂದ ಪಾದ

ವಿದುರನಾ ಮನೆಯಲ್ಲಿ ಭೋಜನಗೈದ ಪಾದ

ಭರದಿ ಧೃತರಾಷ್ಟ್ರನರಮನೆಗೆ ನಡೆತಂದ ಪಾದ

ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ 10

ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ

ದೊರೆ ಧರ್ಮಾದಿಗಳ [ನು] ಒಲಿದ ಪಾದ

ಸರ್ಪಬಾಣವು ಬರಲು ಧರಣಿವೂತ್ತಿದ ಪಾದ

ಕರುಣದಿಂದರ್ಜುನನ ಶಿರವ ಕಾಯ್ದ ಪಾದ 11

ಬ್ರಹ್ಮದೇವರ ತಪಸಿಗೊಲೆದು ಬಂದ ಪಾದ

ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ

ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ

ಉಭಯ ಕಾವೇರಿ ನಿಲಯ ಶ್ರೀರಂಗ ನಿಮ್ಮ ಪಾದ 12

ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ

ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ

ಆದಿವರಹಾರೊಡನೆ ಸ್ಥಳವ ಬೇಡಿದ ಪಾದ

ಸ್ವಾಮಿ ಪುಷ್ಟರಿಣಿನಿಲಯ ಶ್ರೀನಿವಾಸ ನಿಮ್ಮ ಪಾದ 13

ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ

ಹಸ್ತಿಗಿರಿಯಲ್ಲಿ ನೆಲೆಸಿರ್ಪ ಪಾದ

ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ

ವರವ ಪಾಲಿಸೆ ವರದಯೆಂಬೋ ಬಿರುದುಳ್ಳ ಪಾದ 14

ಭಾಷ್ಯಕಾರರ ಸ್ವಪ್ನಗೊಲಿದು ಬಂದ ಪಾದ

ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ

ವರಸಂಧಿಗೃಹದಲ್ಲಿ ವಾಸವಾಗಿಹ ಪಾದ

ಭಾಷ್ಯಕಾರರು ಸುತ್ತಿಸೆ ಭರದಿ ಬಂದ ಪಾದ 15

ಕರುಣದಿಂದರ್ಜುನಿಗೆ ಸಾರಥಿಯಾದ ಪಾದ

ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ

ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ

ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ 16

****