Showing posts with label ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿ ramesha. Show all posts
Showing posts with label ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿ ramesha. Show all posts

Wednesday, 4 August 2021

ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿ ankita ramesha

..

 ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ.

ಥೋರ ಮುತ್ತಿನ ಝಲ್ಲೆ ಬಿಗಿದ ತೇರುವಾಜಿ ಶೃಂಗರಿಸಿದ ದಾರಿ ಮ್ಯಾಲ ನಿಂತಾವ ನಮ್ಮ ವೀರ ರಂಗನ ಕರೆಯ ಬರಲು 1

ಅಚ್ಚ ಮುತ್ತಿನ ಝಲ್ಲೆ ಬಿಗಿದಹೆಚ್ಚಿನ ರಥಗಳುವಾಜಿಜತ್ತಾಗಿ ನಿಂತಾವಮ್ಮಅಚ್ಯುತನ ಕರೆಯ ಬರಲು2

ಬರಿಯ ಮಾಣಿಕ ರತ್ನ ಬಿಗಿದ ದೊರೆಗಳೇರೊ ರಥ ವಾಜಿಸರಿಯಾಗಿ ನಿಂತಾವಮ್ಮ ನಮ್ಮಹರಿಯ ಕರೆಯ ಬರಲು 3

ನಾನಾ ಮುತ್ತು ರತ್ನ ಬಿಗಿದ ಆನೆ ಅಂಬಾರಿಗಳು ಕೋಟಿಮಾನವಂತರು ಏರಬೇಕುಶ್ರೀನಿವಾಸನ ಕರೆಯ ಬರಲು 4

ಮುತ್ತು ಮಾಣಿಕ ರತ್ನ ಬಿಗಿದಹೆಚ್ಚಿನ ರಥಗಳು ವಾಜಿಮಿತ್ರೆಯರಿಂದ ಬರತಾರಮ್ಮನಮ್ಮ ಅಚ್ಯುತನ ಕರೆಯ ಬರಲು 5

ಏಳು ಕೋಟಿ ಕಾಲಾಳುಗಳುಭಾಳ ಮುತ್ತಿನ ರತ್ನವಿಟ್ಟುತಾಳ ಮೇಳದಿ ನಿಂತಾರಮ್ಮವ್ಯಾಳಾ ಶಯನನ ಕರೆಯ ಬರಲು6

ಸಾವಿರ ಬಂಡಿಯ ಮ್ಯಾಲೆ ಹೇರಿ ಬುಕ್ಕಿಟ್ಟು ಗುಲಾಲು ಸೂರ್ಯಾಡಿ ರಂಗನ ಕರೆಯಲು ವೀರರೈವರು ಬರುತಾರಮ್ಮ 7

ಕೊಲ್ಹಾರಿ ಬಂಡಿಯ ಮ್ಯಾಲೆ ಮಲ್ಲಿಗೆ ಸಂಪಿಗೆ ಹೇರಿಚೆಲ್ಲಾಡಿ ರಂಗನ ಕರೆಯ ಬಲ್ಲಿದ ಐವರು ಬರುತಾರಮ್ಮ 8

ಮದ್ದು ಬಾಣ ಬಿರುಸು ಕೋಟಿ ಶೀಘ್ರವಾಗಿ ನಿಂತಾವಮ್ಮಮುದ್ದು ರಂಗನ ಕರೆಯ ಬರಲು ಮಧ್ವ ಮತದ ಬಿರುದು ಹಿಡಿಸಿ 9

ಬಿಡವೋ ಬಾಣ ಬಿರುಸು ಕೋಟಿ ಕಡು ಭಾಗÀವತರು ಕೋಟಿಷಟಶಾಸ್ತ್ರ ಬಲ್ಲವರು ಕೋಟಿಒಡೆಯ ರಂಗನ ಕರೆಯ ಬರಲು 10

ತಂದೆ ರಾಮೇಶನ ಗುಣವ ಬಂಧುಗಳು ಹೊಗಳೋರು ಕೋಟಿಅಂದು ಆರಣ ಬ್ರಾಹ್ಮಣ ಕ್ರಮ ಜಟಿ ಬಂದು ಕರೆವೊ ದ್ವಿಜರು ಕೋಟಿ 11

****