..
ಸೊಂಡಿಲಾನಗರದ ಭೂಪನ ಕೊಂಡಾಡಲ್ವಶವಲ್ಲ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ.
ಥೋರ ಮುತ್ತಿನ ಝಲ್ಲೆ ಬಿಗಿದ ತೇರುವಾಜಿ ಶೃಂಗರಿಸಿದ ದಾರಿ ಮ್ಯಾಲ ನಿಂತಾವ ನಮ್ಮ ವೀರ ರಂಗನ ಕರೆಯ ಬರಲು 1
ಅಚ್ಚ ಮುತ್ತಿನ ಝಲ್ಲೆ ಬಿಗಿದಹೆಚ್ಚಿನ ರಥಗಳುವಾಜಿಜತ್ತಾಗಿ ನಿಂತಾವಮ್ಮಅಚ್ಯುತನ ಕರೆಯ ಬರಲು2
ಬರಿಯ ಮಾಣಿಕ ರತ್ನ ಬಿಗಿದ ದೊರೆಗಳೇರೊ ರಥ ವಾಜಿಸರಿಯಾಗಿ ನಿಂತಾವಮ್ಮ ನಮ್ಮಹರಿಯ ಕರೆಯ ಬರಲು 3
ನಾನಾ ಮುತ್ತು ರತ್ನ ಬಿಗಿದ ಆನೆ ಅಂಬಾರಿಗಳು ಕೋಟಿಮಾನವಂತರು ಏರಬೇಕುಶ್ರೀನಿವಾಸನ ಕರೆಯ ಬರಲು 4
ಮುತ್ತು ಮಾಣಿಕ ರತ್ನ ಬಿಗಿದಹೆಚ್ಚಿನ ರಥಗಳು ವಾಜಿಮಿತ್ರೆಯರಿಂದ ಬರತಾರಮ್ಮನಮ್ಮ ಅಚ್ಯುತನ ಕರೆಯ ಬರಲು 5
ಏಳು ಕೋಟಿ ಕಾಲಾಳುಗಳುಭಾಳ ಮುತ್ತಿನ ರತ್ನವಿಟ್ಟುತಾಳ ಮೇಳದಿ ನಿಂತಾರಮ್ಮವ್ಯಾಳಾ ಶಯನನ ಕರೆಯ ಬರಲು6
ಸಾವಿರ ಬಂಡಿಯ ಮ್ಯಾಲೆ ಹೇರಿ ಬುಕ್ಕಿಟ್ಟು ಗುಲಾಲು ಸೂರ್ಯಾಡಿ ರಂಗನ ಕರೆಯಲು ವೀರರೈವರು ಬರುತಾರಮ್ಮ 7
ಕೊಲ್ಹಾರಿ ಬಂಡಿಯ ಮ್ಯಾಲೆ ಮಲ್ಲಿಗೆ ಸಂಪಿಗೆ ಹೇರಿಚೆಲ್ಲಾಡಿ ರಂಗನ ಕರೆಯ ಬಲ್ಲಿದ ಐವರು ಬರುತಾರಮ್ಮ 8
ಮದ್ದು ಬಾಣ ಬಿರುಸು ಕೋಟಿ ಶೀಘ್ರವಾಗಿ ನಿಂತಾವಮ್ಮಮುದ್ದು ರಂಗನ ಕರೆಯ ಬರಲು ಮಧ್ವ ಮತದ ಬಿರುದು ಹಿಡಿಸಿ 9
ಬಿಡವೋ ಬಾಣ ಬಿರುಸು ಕೋಟಿ ಕಡು ಭಾಗÀವತರು ಕೋಟಿಷಟಶಾಸ್ತ್ರ ಬಲ್ಲವರು ಕೋಟಿಒಡೆಯ ರಂಗನ ಕರೆಯ ಬರಲು 10
ತಂದೆ ರಾಮೇಶನ ಗುಣವ ಬಂಧುಗಳು ಹೊಗಳೋರು ಕೋಟಿಅಂದು ಆರಣ ಬ್ರಾಹ್ಮಣ ಕ್ರಮ ಜಟಿ ಬಂದು ಕರೆವೊ ದ್ವಿಜರು ಕೋಟಿ 11
****
No comments:
Post a Comment